Saturday, June 6, 2026
Homeತಾಜಾ ಸುದ್ದಿಮಧ್ಯಪ್ರದೇಶದಲ್ಲಿ ಸತ್ತ ವ್ಯಕ್ತಿಯ ತಲೆ ಬೆಂಗಳೂರಿನಲ್ಲಿ ಪತ್ತೆ

ಮಧ್ಯಪ್ರದೇಶದಲ್ಲಿ ಸತ್ತ ವ್ಯಕ್ತಿಯ ತಲೆ ಬೆಂಗಳೂರಿನಲ್ಲಿ ಪತ್ತೆ

- Advertisement -
- Advertisement -

ಬೆಂಗಳೂರು: ಅಕ್ಟೋಬರ್ 3 ರಂದು ಮಧ್ಯಪ್ರದೇಶದ ಬೇತುಲ್ ಹಳಿಯ ಮೇಲೆ ರುಂಡವಿಲ್ಲದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಮೃತಪಟ್ಟ ವ್ಯಕ್ತಿಯನ್ನು ಬೇತುಲ್ ನಿವಾಸಿ ರವಿ ಮಾರ್ಕಮ್ (28) ಎಂದು ಗುರುತಿಸಲಾಗಿತ್ತು. ಬಳಿಕ  ಬಳಿಕ ಆ ದೇಹದ ಭಾಗಗಳನ್ನು ಸಂಗ್ರಹ ಮಾಡಿ, ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದರು. ಶವದ ಅಂತ್ಯ ಸಂಸ್ಕಾರವೂ ನಡೆದಿದೆ.

ಇನ್ನು ಅಲ್ಲಿ  ವ್ಯಕ್ತಿಯ ದೇಹ ಪತ್ತೆಯಾಗುತ್ತಿದ್ದಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನೆಯಾಗಿತ್ತು. ಇತ್ತ ಬೆಂಗಳೂರು ಪೊಲೀಸರು ತಲೆ ಸಿಕ್ಕ ಬಳಿಕ ಅದರ ಫೋಟೋವನ್ನು ಎಲ್ಲಾ ಠಾಣೆಗಳಿಗೆ ಕಳುಹಿಸಿದ್ದರು. ಆಗ ಮಾರ್ಕಮ್ ಮೃತದೇಹದ ತಲೆ ಎಂಬುದು ತಿಳಿದಿದೆ. ಬಳಿಕ,  ಎರಡೂ ರಾಜ್ಯಗಳ ಪೊಲೀಸರ ನಡುವೆ ಮಾಹಿತಿ ವಿನಿಯಮವಾಗಿ ಇದೀಗ ತಲೆಯನ್ನು ಹಸ್ತಾಂತರಿಸಲಾಗಿದೆ.

ಇನ್ನು ನವದೆಹಲಿ-ಬೆಂಗಳೂರು ರೈಲಿಗೆ ಅಡ್ಡ ಬಂದಿದ್ದ ರವಿ ಮಾರ್ಕಮ್ ಮೃತಪಟ್ಟಿದ್ದ. ದೇಹ ಬೇತುಲ್‌ ಬಳಿಯೇ ಉಳಿದರೆ ತಲೆ ಮಾತ್ರ ಕತ್ತರಿಸಿದ ಬಳಿಕ ರೈಲು ಇಂಜಿನ್‌ನಲ್ಲಿ ಸಿಲುಕಿಕೊಂಡಿತ್ತು. ಬೆಂಗಳೂರಿನ ರೈಲು ಸಿಬ್ಬಂದಿ ಅಕ್ಟೋಬರ್ 4ರಂದು ತಲೆಯನ್ನು ಪತ್ತೆ ಹಚ್ಚಿದ್ದರು.

- Advertisement -

Latest News

error: Content is protected !!