Monday, May 13, 2024
Homeಪ್ರಮುಖ-ಸುದ್ದಿನವೆಂಬರ್‌ನಿಂದ ಕಾಲೇಜು ಆರಂಭಕ್ಕೆ ಸರ್ಕಾರ ಚಿಂತನೆ

ನವೆಂಬರ್‌ನಿಂದ ಕಾಲೇಜು ಆರಂಭಕ್ಕೆ ಸರ್ಕಾರ ಚಿಂತನೆ

spot_img
- Advertisement -
- Advertisement -

ಬೆಂಗಳೂರು: ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜು ಹೇಗಿದೆ ಅನ್ನೋದು ಮರೆತೇ ಹೋಗೋ ಹಾಗಾಗಿದೆ. ಹೀಗಿರುವಾಗಲೇ ಕಾಲೇಜು, ಶಾಲೆಗಳು ಈಗ ಶುರುವಾಗುತ್ತೆ, ಮತ್ತೆ ಶುರುವಾಗುತ್ತೆ ಅನ್ನೋ ಸುದ್ದಿಗಳು ದಿನಕ್ಕೊಂದರಂತೆ ಹರಿದಾಡುತ್ತಲೇ ಇದೆ. ಹೀಗಿರುವಾಗಲೇ ನವೆಂಬರ್ ನಲ್ಲಿ ಕಾಲೇಜುಗಳನ್ನು ರೀ ಓಪನ್ ಮಾಡೋದಕ್ಕೆ ಸರ್ಕಾರ ಚಿಂತನೆ ನಡೆಸಿದೆ ಅನ್ನೋ ಸುದ್ದಿಯೊಂದು ಹೊರ ಬಿದ್ದಿದೆ.

ಯೆಸ್. ನವೆಂಬರ್  ಎರಡನೇ ಅಥವಾ ಮೂರನೇ ವಾರದಲ್ಲಿ ಪಿಜಿ, ಡಿಗ್ರಿ, ಪಿಯುಸಿ ಕಾಲೇಜುಗಳ ಪ್ರಾರಂಭಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಕಾಲೇಜು ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ತೆರೆ ಮರೆಯಲ್ಲೇ ಸಿದ್ಧತೆ ನಡೆಸಿದೆ. ಕೇಂದ್ರದ ಮಾರ್ಗಸೂಚಿ ಮತ್ತು ಆರೋಗ್ಯ ಇಲಾಖೆ ಮಾರ್ಗಸೂಚಿ ಅನ್ವಯಿಸಿ ಕಾಲೇಜು ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.

ಇನ್ನು ಕಾಲೇಜು ಪ್ರಾರಂಭದ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಸುಳಿವು ನೀಡಿದ್ದಾರೆ. ಶೀಘ್ರವೇ ಸಿಎಂ ಯಡಿಯೂರಪ್ಪ ಜೊತೆ ಸಭೆ ಮಾಡಿ ಕಾಲೇಜು ಪ್ರಾರಂಭದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳೋದಾಗಿ ಉನ್ನತ ಮೂಲಗಳು ತಿಳಿಸಿವೆ. ಸಿಎಂ ಓಕೆ ಅಂದ್ರೆ ಪ್ರಾರಂಭಿಕ ಹಂತವಾಗಿ ಕಾಲೇಜುಗಳನ್ನ ಪ್ರಾರಂಭಿಸಿ, ನಂತರ ಪರಿಸ್ಥಿತಿ ಅವಲೋಕನ ಮಾಡಿಕೊಂಡು ಹೈಸ್ಕೂಲ್ ತೆರೆಯುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

ಅಂದ್ಹಾಗೆ ಕಾಲೇಜು ಪ್ರಾರಂಭಿಸಬೇಕು ಎನ್ನುವ ಸರ್ಕಾರದ ನಿರ್ಧಾರಕ್ಕೆ ಕೆಲ ತಜ್ಞರು ಒಪ್ಪುತ್ತಿಲ್ಲ. ಈ ವರ್ಷ ಕಾಲೇಜು ಓಪನ್ ಮಾಡುವುದು ಬೇಡವೇ ಬೇಡ ಎಂದು ತಜ್ಞರು ಹೇಳಿದ್ರೆ, ಇನ್ನೂ ಕೆಲ ತಜ್ಞರು ಕಾಲೇಜು ಆರಂಭಿಸಿ ಪರವಾಗಿಲ್ಲ. ಆದ್ರೆ ಸರ್ಕಾರ ಕಠಿಣವಾಗಿ ಎಚ್ಚರಿಕೆಯಿಂದ ಮುಂಜಾಗೃತಾ ಕ್ರಮ ವಹಿಸಬೇಕು  ಎಂದಿದ್ದಾರೆ.

- Advertisement -
spot_img

Latest News

error: Content is protected !!