Saturday, June 6, 2026
Homeತಾಜಾ ಸುದ್ದಿಖರೀದಿಸಿದ ಒಂದೇ ದಿನದ ಒಳಗೆ ಕಾರಿನ ಮೇಲೆ ಮರ ಬಿದ್ದು ಕಾರು ಜಖಂ

ಖರೀದಿಸಿದ ಒಂದೇ ದಿನದ ಒಳಗೆ ಕಾರಿನ ಮೇಲೆ ಮರ ಬಿದ್ದು ಕಾರು ಜಖಂ

- Advertisement -
- Advertisement -

ಕಡಬ: ರಸ್ತೆ ಬದಿಯ ಗ್ಯಾರೇಜ್ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರೊಂದರ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಕಾರು ಜಖಂಗೊಂಡ ಘಟನೆ ಪಂಜದ ಸಿ.ಎ. ಬ್ಯಾಂಕ್ ಸಮೀಪ ನಡೆದಿದೆ.

ಮಾರುತಿ ಎಸ್ಟೀಮ್ ಕಾರೊಂದನ್ನು ಪಂಜ ಸಿ.ಎ. ಬ್ಯಾಂಕ್ ಸಮೀಪದ ಮಾರುತಿ ಗ್ಯಾರೇಜ್ ಬಳಿ ರಸ್ತೆ ಬದಿ ನಿಲ್ಲಿಸಲಾಗಿದ್ದು, ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

ಗುರುವಾರವಷ್ಟೇ ಈ ಕಾರನ್ನು ಪಂಜದ ವ್ಯಕ್ತಿಯೋರ್ವರು ಖರೀದಿಸಿದ್ದಾರೆ ಎನ್ನಲಾಗಿದ್ದು, ಕಾರನ್ನು ಖರೀದಿಸಿ ದಿನಪೂರ್ತಿ ಆಗುವುದರ ಒಳಗೆ ಕಾರಿನ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ.

- Advertisement -

Latest News

error: Content is protected !!