Sunday, June 14, 2026
Homeಕರಾವಳಿಪುತ್ತೂರು: ಹೆರಿಗೆ ವೇಳೆ ರಕ್ತಸ್ರಾವದಿಂದಾಗಿ ಬಾಣಂತಿ ಸಾವು, ಮಗು ಕ್ಷೇಮ

ಪುತ್ತೂರು: ಹೆರಿಗೆ ವೇಳೆ ರಕ್ತಸ್ರಾವದಿಂದಾಗಿ ಬಾಣಂತಿ ಸಾವು, ಮಗು ಕ್ಷೇಮ

- Advertisement -
- Advertisement -

ಪುತ್ತೂರು: ಹೆರಿಗೆ ವೇಳೆ ಸಂಭವಿಸಿದ ಅಧಿಕ ರಕ್ತಸ್ರಾವದಿಂದಾಗಿ ಬಾಣಂತಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಪುತ್ತೂರು ತಾಲೂಕಿನ ಕಾವು ಗ್ರಾಮದ ಬಳ್ಳಿಕಾನ ನಿವಾಸಿ ಪ್ರವೀಣ್ ನಾಯ್ಕ್ ಎಂಬವರ ಪತ್ನಿ ಚಂದ್ರಕಲಾ (25) ಎಂದು ಗುರುತಿಸಲಾಗಿದೆ.

ಅದೃಷ್ಟ ಎಂಬಂತೆ ಮೃತ ಚಂದ್ರಕಲಾ ಜನ್ಮ ನೀಡಿದ ಮಗು ಬದುಕುಳಿದಿದೆ ಹಾಗೂ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಚಂದ್ರಕಲಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಹೆರಿಗಾಗಿ ಪುತ್ತೂರಿನ ಪ್ರಗತಿ ಆಸ್ಪತ್ರೆಗಾಗಿ ದಾಖಲಿಸಲಾಗಿತ್ತು. ಅಲ್ಲಿ ಹೆರಿಗೆ ವೇಳೆ ರಕ್ತಸ್ರಾವ ಮತ್ತು ಲೋ ಬಿಪಿ ಕಂಡು ಬಂದ ಹಿನ್ನಲೆಯಲ್ಲಿ ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದ್ರಕಲಾ ಮೃತಪಟ್ಟಿದ್ದಾರೆ.

ಮೃತ ಚಂದ್ರಕಲಾ ಮೂಲತಃ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಸುಬ್ಬಣ್ಣ ನಾಯ್ಕರ ಮಗಳು. ಇವರನ್ನು ಒಂದೂವರೆ ವರ್ಷದ ಹಿಂದೆ ಕಾವು ಗ್ರಾಮದ ಬಳ್ಳಿಕಾನ ನಿವಾಸಿ ಪ್ರವೀಣ್ ನಾಯ್ಕ್ ಜೊತೆ ಮದುವೆ ಮಾಡಿಕೊಡಲಾಗಿತ್ತು.

- Advertisement -

Latest News

error: Content is protected !!