Thursday, June 4, 2026
Homeತಾಜಾ ಸುದ್ದಿಮೈಸೂರು ದಸರಾ ಕೋವಿಡ್ ಪರೀಕ್ಷೆ ಇದ್ದರಷ್ಟೇ ಸುಂದರ!..

ಮೈಸೂರು ದಸರಾ ಕೋವಿಡ್ ಪರೀಕ್ಷೆ ಇದ್ದರಷ್ಟೇ ಸುಂದರ!..

- Advertisement -
- Advertisement -

ಮೈಸೂರು :ಈ ಬಾರಿಯ ದಸರಾ ಆಚರಣೆ ಸಾಕಷ್ಟು ಚರ್ಚೆಗೆ ತುತ್ತಾಗಿತ್ತು. ಹಲವು ನೀತಿ ನಿಯಮಗಳ ಮಧ್ಯೆ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾದಲ್ಲಿ ಭಾಗಿಯಾಗುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ದಸರಾವನ್ನು ಸರಳವಾಗಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ಆಚರಿಸಬೇಕೆಂಬ ಸೂಚನೆ ಇರುವ ಹಿನ್ನೆಲೆಯಲ್ಲಿ ದಸರಾದಲ್ಲಿ ಭಾಗಿಯಾಗುವ ಸಚಿವರು ಸೇರಿದಂತೆ ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದು ಅವರು ತಿಳಿಸಿದರು.

- Advertisement -

Latest News

error: Content is protected !!