Saturday, May 11, 2024
Homeತಾಜಾ ಸುದ್ದಿಹಸುವಿನ ಮೇಲೆ ಅತ್ಯಾಚಾರ, ವಿಕೃತ ವ್ಯಕ್ತಿಯ ಬಂಧನ

ಹಸುವಿನ ಮೇಲೆ ಅತ್ಯಾಚಾರ, ವಿಕೃತ ವ್ಯಕ್ತಿಯ ಬಂಧನ

spot_img
- Advertisement -
- Advertisement -

ಕೇರಳ : ಸಮಾಜದಲ್ಲಿ ದಿನನಿತ್ಯ ನಡೆಯೋ ಕೆಲವೊಂದು ಘಟನೆಗಳನ್ನು ನೋಡಿದ್ರೆ ಮನುಷ್ಯ ಪ್ರಾಣಿಗಳಗಿಂತ ಕಡೆನಾ ಅನ್ನೋ ಅನುಮಾನ ಮೂಡದೇ ಇರೋದಿಲ್ಲ.ಪ್ರತಿದಿನ ನಾವು ಹತ್ತಾರು ಅತ್ಯಾಚಾರ ಪ್ರಕರಣಗಳ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಆದ್ರೆ ಕೇರಳದ ತಿರುವನಂತಪುರಂನಲ್ಲಿ ವ್ಯಕ್ತಿಯೊಬ್ಬ ಹಸುವಿನ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ.

ಯೆಸ್… ಕೋಯಿಕ್ಕೋಡ್ ನ ಕುನ್ನಮಂಗಕಂ ಎಂಬಲ್ಲಿ  ವ್ಯಕ್ತಿಯೊಬ್ಬ ಹಸುವಿನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈತನ  ವಿಚಿತ್ರ ವರ್ತನೆ ಸಿಸಿಟಿಯಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಆರೋಪಿಯನ್ನು ಮುರಳೀಧರನ್ ಎಂದು ಗುರುತಿಸಲಾಗಿದೆ. ಈತ ಎರ್ನಾಕುಲಂ ಮೂಲದವನಾಗಿದ್ದು, ಕೋಯಿಕ್ಕೋಡ್ ನ ವಲಿಯವಯಾಲ್ ಮುಲ್ಲೆರಿಕುನುಮೆಲ್ ನಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಈತ ವಾಸವಿದ್ದ 12 ಮೈಲಿ ದೂರದಲ್ಲಿದ್ದ ಚಥಮಂಗಲಂ ಎಂಬವರ ಮನೆಯ ಹಸುವಿನ ಮೇಲೆ ಆರೋಪಿ ಈ ಕೃತ್ಯ ಎಸಗಿದ್ದಾನೆ.

ರಾತ್ರಿ ಎಲ್ಲರೂ ಮಲಗಿದ ಬಳಿಕ ಆರೋಪಿ ಚಥಮಂಗಲಂ ನಿವಾಸದ ಬಳಿ ಬಂದು ಕೊಟ್ಟಿಗೆಯಿಂದ ಹಸುವನ್ನು ಬಿಚ್ಚಿಕೊಂಡು ಹೊರಗಡೆ ಕರೆದೊಯ್ಯುತ್ತಾನೆ. ಬಳಿಕ ಅದರ ಮೇಲೆ ಅಸಹಜ ಲೈಂಗಿಕ ಕ್ರಿಯೆ ಎಸಗುತ್ತಿದ್ದನು. ತನ್ನ ಕಾಮ ತೃಷೆ ತೀರಿಸಿಕೊಂಡ ನಂತರ ಹಸುವನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗುತ್ತಿದ್ದನು.

ಹೀಗೆ ಅನೇಕ ಬಾರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಬೆಳಗಾಗುವಾಗ ಇಲ್ಲದಿರುವುದರಿಂದ ಆತಂಕಗೊಂಡ ಮಾಲೀಕ ಕುಂತಮಂಗಳಂ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಮಾಲೀಕ ಕೊಟ್ಟಿಗೆಯ ಬಳಿ ಸಿಸಿಟಿವಿ ಕೂಡ ಫಿಕ್ಸ್ ಮಾಡಿದರು. ಹೀಗಾಗಿ ವ್ಯಕ್ತಿಯ ದುರ್ವರ್ತನೆ ಸಿಸಿಟಿಯಲ್ಲಿ ಸೆರೆಯಾಗಿದ್ದು, ನೀಚ ಕೃತ್ಯ ಬಯಲಾಗಿದೆ.ಹಸುವನ್ನು ಪಶುವೈದ್ಯರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅದರ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆದಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!