Saturday, June 6, 2026
Homeಕರಾವಳಿಉಡುಪಿಮಣಿಪಾಲ: ರೂ.4.63 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತು ವಶಕ್ಕೆ, ಆರೋಪಿ ಬಂಧನ

ಮಣಿಪಾಲ: ರೂ.4.63 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತು ವಶಕ್ಕೆ, ಆರೋಪಿ ಬಂಧನ

- Advertisement -
- Advertisement -

ಉಡುಪಿ: ಮಣಿಪಾಲದ ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತಿದ್ದ ಯುವಕನೊಬ್ಬನನ್ನು ಮಣಿಪಾಲ ಪೊಲೀಸರು ಮಣಿಪಾಲದ ಎಂಡ್‌ಪಾಯಿಂಟ್ ಪ್ರದೇಶದಲ್ಲಿ ಬಂಧಿಸಿದ್ದಾರೆ.

ಬ್ರಹ್ಮಾವರದ ಮಹಮ್ಮದ್ ಫಝಲ್ ಬಂಧಿತ ಯುವಕ.

ನಿಷೇದಿತ ಮಾದಕ ವಸ್ತುಗಳನ್ನು ಬ್ರಹ್ಮಾವರದಿಂದ ಮಣಿಪಾಲಕ್ಕೆ ಮಾರಾಟ ಮಾಡಲು ಬಂದಿರುವುದಾಗಿ ನೀಡಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಪೊಲೀಸರು ಆರೋಪಿಯಿಂದ ಎರಡು ಮೊಬೈಲ್ ಫೋನ್‌ಗಳು, 54 ನಿಷೇಧಿತ ಎಂಡಿಎಂಎ ಮಾತ್ರೆ ಗಳು, 30 ಗ್ರಾಂ ಬ್ರೌನ್‌ಶುಗರ್ ಸೇರಿ ಅಂದಾಜು 4,62,000 ರೂ. ಮೌಲ್ಯದ ಸೊತ್ತುಗಳು, ಚುನಾವಣಾ ಗುರುತು ಚೀಟಿ, ಡೆಬಿಟ್ ಕಾರ್ಡ್‌ಗಳು, ಅಂಚೆ ಇಲಾಖೆಯ ಇಂಟಿಮೇಷನ್ ಸ್ಲಿಪ್ ವಶಪಡಿಸಿಕೊಂಡಿದ್ದಾರೆ.

ತಾನು ಸ್ನೇಹಿತರಾದ ಉಡುಪಿಯ ಫರ್ಹಾನ್ ಹಾಗೂ ಸಫಾ ಜೊತೆಗೆ ಸೇರಿ ಕೆಲವು ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್‌ಶುಗರ್‌ನ್ನು ಆನ್‌ಲೈನ್‌ನಲ್ಲಿ ಆರ್ಡರ್ ಕೊಟ್ಟು ತರಿಸಿಕೊಂಡಿದ್ದು, ಅವರಿಬ್ಬರಿಗಾಗಿ ಇಲ್ಲಿ ಕಾಯುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಇವುಗಳನ್ನು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವುದಾಗಿಯೂ ಆತ ಪೊಲೀಸರಿಗೆ ತಿಳಿಸಿದ್ದಾನೆ.

- Advertisement -

Latest News

error: Content is protected !!