Friday, June 5, 2026
Homeತಾಜಾ ಸುದ್ದಿವಿಷಯುಕ್ತ ಮದ್ಯ ಸೇವಿಸಿ 11 ಕಾರ್ಮಿಕರು ಸಾವು, ಹಲವರ ಸ್ಥಿತಿ ಗಂಭೀರ

ವಿಷಯುಕ್ತ ಮದ್ಯ ಸೇವಿಸಿ 11 ಕಾರ್ಮಿಕರು ಸಾವು, ಹಲವರ ಸ್ಥಿತಿ ಗಂಭೀರ

- Advertisement -
- Advertisement -

ಉಜ್ಜೈನಿ: ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯ ಛತ್ರಿ ಚೌಕ್‌ನ ಗೋಪಾಲ್ ಮಂದಿರ ಪ್ರದೇಶದಲ್ಲಿ ವಿಷಯುಕ್ತ ಮದ್ಯ ಸೇವಿಸಿದ ಪರಿಣಾಮ 11 ಕಾರ್ಮಿಕರು ಮೃತಪಟ್ಟಿರುವ ಘಟನೆ ನಡೆದಿದೆ.

ಇಂದು ಬೆಳಗ್ಗೆ ರಸ್ತೆ ಬದಿ ಬಿದ್ದಿದ್ದ ಕಾರ್ಮಿಕರನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತಕ್ಷಣವೇ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇವರಲ್ಲಿ 11ಮಂದಿ ಸಾವನ್ನಪ್ಪಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

ಮರಣೋತ್ತರ ಪರೀಕ್ಷೆಗಳ ಪ್ರಾಥಮಿಕ ವರದಿಗಳ ಪ್ರಕಾರ, ಅಗ್ಗದ ಮದ್ಯ ಅಥವಾ ಡೆನಾಚರ್ಡ್ ಸ್ಪಿರಿಟ್ ಸೇವನೆಯಿಂದ ಸಾವು ಸಂಭವಿಸಿದೆ ಎಂದು ತೋರುತ್ತದೆ ಎನ್ನಲಾಗಿದೆ.

- Advertisement -

Latest News

error: Content is protected !!