Saturday, June 6, 2026
Homeತಾಜಾ ಸುದ್ದಿಹತ್ರಾಸ್ ಘಟನೆ ಮರೆಯುವ ಮುನ್ನ ಬಿಹಾರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ-ತಾಯಿ, ಮಗುವನ್ನು ಕಟ್ಟಿ ನದಿಗೆ...

ಹತ್ರಾಸ್ ಘಟನೆ ಮರೆಯುವ ಮುನ್ನ ಬಿಹಾರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ-ತಾಯಿ, ಮಗುವನ್ನು ಕಟ್ಟಿ ನದಿಗೆ ಎಸೆದ ಪಾಪಿಗಳು!..

- Advertisement -
- Advertisement -

ಬಿಹಾರ:ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿ ಅತ್ಯಾಚಾರ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಿಹಾರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ 5 ವರ್ಷದ ಮಗನೊಂದಿಗೆ ಆಕೆಯನ್ನು ನದಿಗೆ ಎಸೆಯಲಾಗಿದೆ. ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದು ಪ್ರಯತ್ನದಲ್ಲಿ ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ಬಿಹಾರದ ಬಕ್ಸಾರ್ ನಲ್ಲಿ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗುವಿನೊಂದಿಗೆ ಬ್ಯಾಂಕ್ ಗೆ ತೆರಳುತ್ತಿದ್ದ ಮಹಿಳೆಯನ್ನು ಅಪಹರಿಸಿದ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ತಾಯಿ, ಮಗುವನ್ನು ಕಟ್ಟಿ ನದಿಗೆ ಎಸೆದಿದ್ದಾರೆ. ಮಹಿಳೆಯ ಕೂಗಾಟ ಕೇಳಿದ ಸ್ಥಳೀಯರು ಆಕೆಯನ್ನು ನದಿಯಿಂದ ರಕ್ಷಿಸಿದ್ದು, ಮಗು ಮೃತಪಟ್ಟಿದೆ.

- Advertisement -

Latest News

error: Content is protected !!