Friday, June 5, 2026
Homeಕರಾವಳಿಉಡುಪಿರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣದ ಮತ್ತೆ ನಾಲ್ವರು ಆರೋಪಿಗಳ ಬಂಧನ

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣದ ಮತ್ತೆ ನಾಲ್ವರು ಆರೋಪಿಗಳ ಬಂಧನ

- Advertisement -
- Advertisement -

ಉಡುಪಿ: ಹಿರಿಯಡ್ಕದಲ್ಲಿ ನಡುರಸ್ತೆಯಲ್ಲೇ ಹತ್ಯೆಗೀಡಾಗಿದ್ದ ಪಡುಬಿದ್ರಿ ಇನ್ನಾ ನಿವಾಸಿ ರೌಡಿಶೀಟರ್ ಕಿಶನ್ ಹೆಗ್ಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇಂದು ತಲೆ ಮರೆಸಿಕೊಂಡಿದ್ದ ಬಾಕಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಕಾಟಿಪಳ್ಳ ಗ್ರಾಮದ ಸಚಿನ್ ಡಿ ಅಮೀನ್ ಯಾನೆ ಸಚ್ಚು(37), ಅಕ್ಷಯ್ ಶೆಟ್ಟಿಗಾರ್(26), ತೋಕುರು ನಿವಾಸಿ ಚೇತನ್(23), ಕಾಟಿಪಳ್ಳದ ಸಂಜಿತ್ ಪ್ರದಾನ್ ಯಾನೆ ಶೈಲೇಶ(19) ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್ ಕಾರು, ಮಾರುತಿ ರಿಟ್ಜ್, ಇನೋವಾ ಕಾರು, 2 ಪಲ್ಸರ್ ಬೈಕ್ ಸೇರಿದಂತೆ ಸುತ್ತಿಗೆ ತಲವಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಬ್ರಹ್ಮಾವರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ, ವೃತ್ತ ಕಛೇರಿಯ ಎಎಸ್‌ಐ ಕೃಷ್ಣಪ್ಪ, ಸಿಬ್ಬಂದಿಯವರಾದ ಪ್ರದೀಪ್ ನಾಯಕ, ವಾಸುದೇವ ಪಿ, ಗಣೇಶ, ರವೀಂದ್ರ ಹೆಚ್, ಚಾಲಕ ಶೇಖರ್, ಬ್ರಹ್ಮಾವರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ, ಸಿಬ್ಬಂದಿ ಯವರು ದಿಲೀಪ್, ಚಾಲಕ ಅಣ್ಣಪ್ಪ, ಡಿ.ಸಿ.ಐ.ಬಿ ತಂಡದ ಎ.ಎಸ್.ಐ ರವಿಚಂದ್ರನ್ ಸಿಬ್ಬಂದಿಯವರು ರಾಮು ಹೆಗ್ಡೆ & ರಾಘವೇಂದ್ರ ಮತ್ತು ಹಿರಿಯಡ್ಕ ಠಾಣೆ ಸಿಬ್ಬಂದಿಯವರು ಹರೀಶ್ ಮತ್ತು ಶಿವರಾಜ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

- Advertisement -

Latest News

error: Content is protected !!