Monday, May 13, 2024
Homeತಾಜಾ ಸುದ್ದಿಬರೋಬ್ಬರಿ 200 ದಿನಗಳ ಬಳಿಕ ಸಿಕ್ತು ರಾಯರ ದರ್ಶನಕ್ಕೆ ಅವಕಾಶ

ಬರೋಬ್ಬರಿ 200 ದಿನಗಳ ಬಳಿಕ ಸಿಕ್ತು ರಾಯರ ದರ್ಶನಕ್ಕೆ ಅವಕಾಶ

spot_img
- Advertisement -
- Advertisement -

ರಾಯಚೂರು : ಬರೋಬ್ಬರಿ 200 ದಿನಗಳ ಬಳಿಕ ಕೊನೆಗೂ ರಾಯರ ಭಕ್ತರಿಗೆ ಗುರು ರಾಯರನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಇಂದು ಮಠದ ಮುಖ್ಯ ದ್ವಾರವನ್ನು ತೆರೆಯಲಾಗಿದೆ. ಮಾರ್ಚ್ 21 ರಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಮಠವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಮಠದಲ್ಲಿ ಕೊರೊನಾ ನಿಯಮ ಪಾಲನೆ ಕಡ್ಡಾಯವಾಗಿದ್ದು, ರಾಯರ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮಠದ ಆಡಳಿತ ಮಂಡಳಿ ಸೂಚಿಸಿದೆ.

ಇಂದು ಭಕ್ತರಿಗೆ ದರ್ಶನದ ಅವಕಾಶ ನೀಡಿದ ಹಿನ್ನೆಲೆ ಮಠದ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಿದರು. ಮಠದ ಪ್ರಾಂಗಣ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಕ್ಕೆ ರಾಯರ ಭಕ್ತರು ಸಂತಸಗೊಂಡಿದ್ದಾರೆ. ದರ್ಶನ ಪಡೆದು ಕೆಲಹೊತ್ತು ಮಠದಲ್ಲಿ ಕಾಲ ಕಳೆದು ಮರಳುತ್ತಿದ್ದಾರೆ.

- Advertisement -
spot_img

Latest News

error: Content is protected !!