Wednesday, June 3, 2026
Homeಕರಾವಳಿಸ್ವಂತ ಅಣ್ಣ ಹಾಗೂ ಸಂಬಂಧಿಯಿಂದ ಲೈಂಗಿಕ ದೌರ್ಜನ್ಯ, ಗರ್ಭಿಣಿಯಾದ ಅಪ್ರಾಪ್ತೆ

ಸ್ವಂತ ಅಣ್ಣ ಹಾಗೂ ಸಂಬಂಧಿಯಿಂದ ಲೈಂಗಿಕ ದೌರ್ಜನ್ಯ, ಗರ್ಭಿಣಿಯಾದ ಅಪ್ರಾಪ್ತೆ

- Advertisement -
- Advertisement -

ಬೆಳ್ತಂಗಡಿ : ಸ್ವಂತ ಅಣ್ಣ ಹಾಗೂ ಹತ್ತಿರದ ಸಂಬಂಧಿಯಿಂದ 8ನೇ ತರಗತಿ ಅಪ್ರಾಪ್ತೆಯೊಬ್ಬಳು ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ನಡೆದಿದೆ.

ಅಪ್ರಾಪ್ತೆಯ ಸಹೋದರ ಹಾಗೂ ಹತ್ತಿರದ ಸಂಬಂಧಿ 17 ಹಾಗೂ 16 ವರ್ಷದ ಅಪ್ರಾಪ್ತ ಬಾಲಕರಿಬ್ಬರು  ಜುಲೈ 2019 ರಿಂದ ಸಪ್ಟಂಬರ್ 2020ರವರೆಗೆ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.

ಆಕೆಯ ದೈಹಿಕ ಬದಲಾವಣೆಯನ್ನು ಗಮನಿಸಿದ ಆಕೆಯ ತಾಯಿ ಹಾಗೂ ಅಕ್ಕ, ಕೂಡಲೇ ಆಕೆಯನ್ನು  ನಾರಾವಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ, ಅಪ್ರಾಪ್ತೆ ಏಳು ತಿಂಗಳ ಗರ್ಭಿಣಿ ಅನ್ನೋದು ಗೊತ್ತಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!