Monday, August 31, 2026
Homeಕರಾವಳಿಮಂಗಳೂರುಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ : ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ : ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಯಾರಿಗೆಲ್ಲಾ ಸುತ್ತಿಕೊಳ್ಳುತ್ತೆ ಅಂತಾ ಹೇಳೋದಕ್ಕೆ ಸಾಧ್ಯನೇ ಆಗುತ್ತಿಲ್ಲ. ಇದೀಗ ಖ್ಯಾತ ನಿರೂಪಕಿ ಅನುಶ್ರೀಗೆ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿದೆ. ಅಲ್ಲದೇ ಸಿಸಿಬಿ ಪೊಲೀಸರು ಅನುಶ್ರೀ ಗೆ ನೋಟಿಸ್ ಕೂಡ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಅನುಶ್ರೀಗೆ ನೋಟಿಸ್ ನೀಡೋದಕ್ಕಾಗಿ ಮಂಗಳೂರಿನಿಂದ ಸಿಸಿಬಿ ಪೋಲಿಸರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅನುಶ್ರೀ ನನಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ ಎಂದು ಹೇಳಿದ್ದಾರೆ. ಆದರೆ ಸಿಸಿಬಿ ಮೂಲಗಳ ಪ್ರಕಾರ ಅನುಶ್ರೀಗೆ ವ್ಯಾಟ್ಯಾಫ್ ಮೂಲ ನೋಟಿಸ್ ನ್ನು ಕಳುಹಿಸಲಾಗಿದೆ. ಇನ್ನು ಕಿಶೋರ್ ಶೆಟ್ಟಿಯ ಬಂಧನವಾದ ಬೆನ್ನಲೇ ಅನುಶ್ರೀ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಸಿಸಿಬಿ ವಿಚಾರಣೆ ವೇಳೆ ಕಿಶೋರ್, ಅನುಶ್ರೀ ತಾನು ನಡೆಸಿದ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದರು ಅನ್ನೋ ಮಾಹಿತಿಯನ್ನೂ ಕೂಡ ಪೊಲೀಸರಿಗೆ ನೀಡಿದ್ದ. ಹಾಗೇ ಬಂಧಿತ ಇನ್ನೋರ್ವ ಆರೋಪಿ ತರುಣ್ ಕೂಡ ಅನುಶ್ರೀ ಹೆಸರನ್ನು ಹೇಳಿದ್ದ.

ಮತ್ತೊಂದು ಕಡೆ ಸಿಸಿಬಿ ಪೊಲೀಸರು ಕಿಶೋರ್ ಶೆಟ್ಟಿ ಮೊಬೈಲ್ ಪರಿಶೀಲನೆ ನಡೆಸಿದ ವೇಳೆ ಅನುಶ್ರೀ ಆತನಿಗೆ ಪದೇ ಪದೇ ಕರೆ ಮಾಡಿರೋದು ಕೂಡ ಗೊತ್ತಾಗಿದೆ. ಈ ಎಲ್ಲಾ ವಿಚಾರಗಳನ್ನು ಕಳೆ ಹಾಕಿರುವ ಸಿಸಿಬಿ ಪೊಲೀಸರು ಅನುಶ್ರೀ ಅವರಿಗೆ ನೋಟಿಸ್ ನೀಡಿದೆ.

- Advertisement -

Latest News

error: Content is protected !!