Friday, June 5, 2026
Homeತಾಜಾ ಸುದ್ದಿಪ್ರತಿಭಾವಂತ ವಿದ್ಯಾರ್ಥಿನಿಗೆ ಇಂಟರ್‌ನೆಟ್‌ ಸಮಸ್ಯೆ-ನೆರವಿಗೆ ನಿಂತ್ರು "ಸುಧಾಮ್ಮ"

ಪ್ರತಿಭಾವಂತ ವಿದ್ಯಾರ್ಥಿನಿಗೆ ಇಂಟರ್‌ನೆಟ್‌ ಸಮಸ್ಯೆ-ನೆರವಿಗೆ ನಿಂತ್ರು “ಸುಧಾಮ್ಮ”

- Advertisement -
- Advertisement -

ಕುಂದಾಪುರ: ಲಾಕ್ ಡವ್ನ್ ನಿಂದ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ತರಗತಿ ಆರಂಭಿಸಿದ್ದು ಹಲವು ಗ್ರಾಮೀಣ ಪ್ರದೇಶದ ಮಕ್ಕಳು ಕಷ್ಟಪಡುತ್ತಿದ್ದಾರೆ.ಇಂಟರ್‌ನೆಟ್‌ ಸಮಸ್ಯೆಯಿಂದಾಗಿ ಗುಡ್ಡದ ಮೇಲೊಂದು ಜೋಪಡಿ ನಿರ್ಮಿಸಿಕೊಂಡು ಸ್ಮಾರ್ಟ್‌ಫೋನ್‌ನಲ್ಲಿ ಅತ್ಯಂತ ಕಷ್ಟಕರವಾಗಿ ಆನ್‌ಲೈನ್‌ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದ ಗೋಳಿಕೆರೆಯ ಪ್ರತಿಭಾವಂತ ವಿದ್ಯಾರ್ಥಿನಿಗೆ ಇಸ್ಫೋಸಿಸ್‌ ಫೌಂಡೇಶನ್‌ ನೆರವಾಗಿದೆ.

ಆನ್‌ಲೈನ್‌ ತರಗತಿಗಾಗಿ ವಿದ್ಯಾರ್ಥಿನಿ ಭೂಮಿಕಾ ಪೋಷಕರು ಪಡುತ್ತಿರುವ ಕಷ್ಟಗಳನ್ನು ಮನಗಂಡ ಇಸ್ಫೋಸಿಸ್‌ ಫೌಂಡೇಶ್‌ನ ಸುಧಾಮೂರ್ತಿ ಅವರು ವಿದ್ಯಾರ್ಥಿನಿ ಭೂಮಿಕಾಳ ಆನ್‌ಲೈನ್‌ ಕಲಿಕೆಗೆ ಸಹಾಯವಾಗುವ ನಿಟ್ಟಿನಲ್ಲಿ ಲ್ಯಾಪ್‌ಟಾಪ್‌, ಯುಪಿಎಸ್‌ ಹಾಗೂ ಒಂದು ವರ್ಷಗಳ ಇಂಟರ್‌ನೆಟ್‌ ರೀಚಾರ್ಜ್ ಉಳ್ಳ ಡಾಂಗಲ್‌ ಅನ್ನು ನೀಡಿದ್ದಾರೆ.ಇಸ್ಫೋಸಿಸ್‌ನ ಉಡುಪಿ ಪ್ರತಿನಿಧಿ ಯಶವಂತ್‌ ಅವರ ಮೂಲಕ ಗೋಳಿಕೆರೆಯ ಮನೆಯಲ್ಲಿ ಲ್ಯಾಪ್‌ಟಾಪ್‌ ಹಸ್ತಾಂತರಿಸಿದರು.

- Advertisement -

Latest News

error: Content is protected !!