Friday, June 5, 2026
Homeತಾಜಾ ಸುದ್ದಿಕೇಂದ್ರ ಸಚಿವರ ಸಾವಿನ ಬೆನ್ನಲ್ಲೇ ಆಘಾತಕಾರಿ ಸುದ್ದಿ "ಸುರೇಶ್ ಅಂಗಡಿ ಪಿಎ ಗೂ ಕೊರೊನಾಸೋಂಕು"

ಕೇಂದ್ರ ಸಚಿವರ ಸಾವಿನ ಬೆನ್ನಲ್ಲೇ ಆಘಾತಕಾರಿ ಸುದ್ದಿ “ಸುರೇಶ್ ಅಂಗಡಿ ಪಿಎ ಗೂ ಕೊರೊನಾಸೋಂಕು”

- Advertisement -
- Advertisement -

ಬೆಂಗಳೂರು : ಕೊರೊನಾ ವೈರಸ್ ದಿನದಿಂದ ದಿನಕ್ಕೆ ದೇಶಾದ್ಯಂತ ತನ್ನ ಕಬಂಧ ಬಾಹುವನ್ನು ವಿಸ್ತರಿಸುತ್ತಿದೆ. ಕೊರೊನಾ ಮಹಾಮಾರಿಗೆ ನಿನ್ನೆ ಕೇಂದ್ರ ಸಚಿವ ಸುರೇಶ್ ಅಂಗಡಿ ಮೃತಪಟ್ಟಿರುವುದರ ಬೆನ್ನಲ್ಲೇ ಸುರೇಶ್ ಅಂಗಡಿ ಪಿಎ ಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಸುರೇಶ್ ಅಂಗಡಿ ಪಿಎ ಆಗಿರುವ ಪ್ರಕಾಶ್ ಅಂಗಡಿಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆ ನೀಡಲಾಗುತ್ತಿದೆ. ಸುರೇಶ್ ಅಂಗಡಿ ಅವರು ಕೊರೊನಾ ವೈರಸ್ ನಿಂದ ಬುಧವಾರ ದೆಹಲಿಯಲ್ಲಿ ಮೃತಪಟ್ಟಿದ್ದು, ಅವರ ಆಪ್ತ ವಲಯದವರನ್ನು ಕೊರೊನಾ ಪರೀಕ್ಷೆ ಗೊಳಪಡಿಸಲಾಗುತ್ತಿದೆ.

- Advertisement -

Latest News

error: Content is protected !!