- Advertisement -
![]()
- Advertisement -
ನೆಲ್ಯಾಡಿ : ಕೌಟುಂಬಿಕ ಜಗಳ ತಾರಕ್ಕೇರಿ ಗಂಡನೇ ತನ್ನ ಹೆಂಡತಿ ಹಾಗೂ ಚಿಕ್ಕಮ್ಮನ ಆಸಿಡ್ ದಾಳಿ ನಡೆಸಿರುವ ಘಟನೆ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಪಾಂಡಿಬೆಟ್ಟುವಿನಲ್ಲಿ ನಡೆದಿದೆ.
ಇಂದು ಬೆಳಗ್ಗೆ ನೆಲ್ಯಾಡಿಯ ನಿವಾಸಿ ಬಿಜು ಎಂಬಾತ ತನ್ನ ಪತ್ನಿಯ ಶೈನಿ ಹಾಗೂ ಅವರ ಚಿಕ್ಕಮ್ಮ ಝಾನ್ಸಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ.
ಬಿಜು ಆ್ಯಸಿಡ್ ದಾಳಿಯಿಂದಾಗಿ ಆತನ ಪತ್ನಿ ಶೈನಿ ಮತ್ತು ಪತ್ನಿಯ ಚಿಕ್ಕಮ್ಮ ಝಾನ್ಸಿಗೆ ಮುಖ, ಕಣ್ಣಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಇಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


