Sunday, May 5, 2024
Homeತಾಜಾ ಸುದ್ದಿಖ್ಯಾತ ನಟ ರಾಕ್ ಲೈನ್ ಸುಧಾಕರ್ ಹೃದಯಾಘಾತದಿಂದ ನಿಧನ

ಖ್ಯಾತ ನಟ ರಾಕ್ ಲೈನ್ ಸುಧಾಕರ್ ಹೃದಯಾಘಾತದಿಂದ ನಿಧನ

spot_img
- Advertisement -
- Advertisement -

ಬೆಂಗಳೂರು: ಶೂಟಿಂಗ್​ ಸಮಯದಲ್ಲೇ ಹೃದಯಾಘತ ಸಂಭವಿಸಿದ್ದರಿಂದ ಹಿರಿಯ ನಟ ರಾಕ್​ಲೈನ್​ ಸುಧಾಕರ್​ ಮೃತಪಟ್ಟಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಪೋಷಕ ಪಾತ್ರ ಹಾಗೂ ಕಾಮಿಡಿ ಪಾತ್ರಗಳಲ್ಲಿ ಅವರು ನಟಿಸಿದ್ದರು. ಅವರ ಅಗಲಿಕೆ ಇಡೀ ಚಿತ್ರರಂಗವೇ ಶೋಕ ವ್ಯಕ್ತಪಡಿಸಿದೆ.

ಕೆಲ ದಿನಗಳ ಹಿಂದಷ್ಟೇ ಸುಧಾಕರ್​ಗೆ ಕೊರೋನಾ ಸೋಂಕು ತಗುಲಿತ್ತು. ಇದಕ್ಕಾಗಿ ಅವರು ಚಿಕಿತ್ಸೆ ಪಡೆದು ಬಂದಿದ್ದರು. ಅವರು ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಮತ್ತೆ ಶೂಟಿಂಗ್​ ಕೆಲಸಗಳಲ್ಲಿ ಪಾಲ್ಗೊಂಡಿದ್ದರು.

ಸಿಂಪಲ್​ ಸುನಿ ನಿರ್ದೇಶನದ ಸಿನಿಮಾ ಶೂಟಿಂಗ್​ ವೇಳೆ ಅವರಿಗೆ ಹೃದಯಾಘತ ಸಂಭವಿಸಿದೆ. ಕೊಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಕನ್ನಡದ ಖ್ಯಾತ ನಟ ರಾಕ್ ಲೈನ್ ಸುಧಾಕರ್ ಇನ್ನಿಲ್ಲವಾಗಿದ್ದಾರೆ.

ಅಜಿತ್, ಉಡುಂಬಾ, ಟೋಪಿವಾಲಾ, ಜೂಮ್, ಚಮಕ್, ಪಟಾಕಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಕ್​ಲೈನ್​ ಸುಧಾಕರ್ ನಟಿಸಿದ್ದರು.

- Advertisement -
spot_img

Latest News

error: Content is protected !!