Saturday, June 6, 2026
Homeತಾಜಾ ಸುದ್ದಿತಾಂತ್ರಿಕ ತೊಂದರೆಯಿಂದ ಎಟಿಎಂನಲ್ಲಿ 10000 ಕಳಕೊಂಡ್ರು!… ಸಿಕ್ಕಿದ ಹಣ ಹಿಂತಿರುಗಿಸಿ "ಪ್ರಾಮಾಣಿಕತೆ ಮೆರೆದ" ಅಂಬ್ಯುಲೆನ್ಸ್ ಚಾಲಕ

ತಾಂತ್ರಿಕ ತೊಂದರೆಯಿಂದ ಎಟಿಎಂನಲ್ಲಿ 10000 ಕಳಕೊಂಡ್ರು!… ಸಿಕ್ಕಿದ ಹಣ ಹಿಂತಿರುಗಿಸಿ “ಪ್ರಾಮಾಣಿಕತೆ ಮೆರೆದ” ಅಂಬ್ಯುಲೆನ್ಸ್ ಚಾಲಕ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಮುಂಡೂರು ನಿವಾಸಿ ಪಿಗ್ಮಿ ಕಲೆಕ್ಟರ್ ರಾಜೇಶ್ ಬೆಳ್ತಂಗಡಿ ಕೆಲವು ದಿನಗಳ ಹಿಂದೆ ಎಸ್ ಬಿ ಐ ಎಟಿಎಂ ನಿಂದ 10,000 ಹಣ ತೆಗೆಯಲು ನಂಬರ್ ಒತ್ತಿ ಕೆಲ ಸಮಯವಾದರೂ ಹಣ ಬಾರದಾಗ ತಾನು ಖಾತೆ ಹೊಂದಿರುವ ಕೆನರಾ ಬ್ಯಾಂಕ್ ಗೆ ದೂರುನೀಡಿದ್ದರು ಅವರು ಪರಿಶೀಲಿಸಿ ಹಣ ಖಾತೆಯಿಂದ ಕಡಿತಗೊಂಡಿದೆ ಯಾರೋ ತಕೊಂಡು ಹೋಗಿರಬೇಕು ಎಂದಿರುತ್ತಾರೆ.

ಈ ಬಗ್ಗೆ‌ ರಾಜೇಶ್ ರವರು SBI ಬ್ಯಾಂಕ ಲ್ಲಿ ವಿವರಿಸಿದರೂ ಪ್ರಯೋಜನವಾಗದೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಪೋಲೀಸರ ತನಿಖೆವೇಳೆ ರಾಜೇಶ್ ರವರು ಎಟಿಎಂ ನಿಂದ ಹೊರಗೆ ಬಂದ ನಂತರ ಹೋದ ಗ್ರಾಹಕ ಹಮೀದ್ ಎಂಬವರು 10,000 ಹಣ ಸಿಕ್ಕಿದ್ದು ಯಾರಾದರೂ ಬಂದು ಕೇಳಿದ್ದಲ್ಲಿ ಅವರ ವಿಸಿಟಿಂಗ್ ಕಾರ್ಡ್ ನೀಡಿರುವುದು ತಿಳಿಯಿತು. ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಯಲ್ಲಿ ಅಂಬ್ಯುಲೆನ್ಸ್ ಚಾಲಕರಾಗಿರುವ ಹಮೀದ್ ತಮಗೆ ದೊರಕಿದ್ ಹಣ ರಾಜೇಶ್ ರನ್ನು ಕರೆಯಿಸಿದಾಗ 10,000 ವನ್ನು ಹಮೀದ್ ರವರು ರಾಜೇಶ್ ಗೆ ಹಸ್ತಾಂತರಿಸಿರುತ್ತಾರೆ.

- Advertisement -

Latest News

error: Content is protected !!