Friday, June 5, 2026
Homeತಾಜಾ ಸುದ್ದಿಶಾಲೆಯ ತಡೆಗೋಡೆ ಕುಸಿದು ಸ್ಥಳದಲ್ಲೇ ಅಸುನೀಗಿದ ಕಾರ್ಮಿಕ

ಶಾಲೆಯ ತಡೆಗೋಡೆ ಕುಸಿದು ಸ್ಥಳದಲ್ಲೇ ಅಸುನೀಗಿದ ಕಾರ್ಮಿಕ

- Advertisement -
- Advertisement -

ಮಂಗಳೂರು: ಕೂಳೂರಿನ ಶಾಲೆಯ ತಡೆಗೋಡೆ ಕುಸಿದು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಡೆದಿದೆ.ಮೃತರನ್ನು ನೀರುಮಾರ್ಗದ ನಿವಾಸಿ ಉಮೇಶ್ (38) ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ನಗರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಾಂಪೌಂಡ್ ಗೋಡೆ ಕುಸಿದಿದೆ.ಇದ್ದಕ್ಕಿದ್ದಂತೆ ತಡೆಗೋಡೆ ಕುಸಿದ ಪರಿಣಾಮ ಅಲ್ಲಿಯೇ ಕೆಲಸ ಮಾಡುತ್ತಿದ್ದ ಉಮೇಶ್‌ ಅವರು ಮಣ್ಣಿನಡಿಯಲ್ಲಿ ಸಿಲುಕಿದ್ದರು.

ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಚರಣೆ ಮಾಡಿದರೂ ಕೂಡಾ ಉಮೇಶ್ ಅವರು ಮೃತಪಟ್ಟಿದ್ದರು. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!