Thursday, June 4, 2026
Homeತಾಜಾ ಸುದ್ದಿಐಂದ್ರಿತಾ ಹಾಗೂ ದಿಗಂತ್ ಗೆ ಬಿಗ್ ರಿಲೀಫ್, ಸ್ಟಾರ್ ದಂಪತಿ ವಿಚಾರಣೆ ಅಂತ್ಯ

ಐಂದ್ರಿತಾ ಹಾಗೂ ದಿಗಂತ್ ಗೆ ಬಿಗ್ ರಿಲೀಫ್, ಸ್ಟಾರ್ ದಂಪತಿ ವಿಚಾರಣೆ ಅಂತ್ಯ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಈಗಗಾಲೇ ದಿಗಂತ್ ಹಾಗೂ ಐಂದ್ರಿತಾ ಅವರನ್ನು ವಶಕ್ಕೆ ಪಡೆದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಇದೀಗ ವಿಚಾರಣೆ ಅಂತ್ಯಗೊಂಡಿರುವ ಕಾರಣ ಸ್ಟಾರ್ ದಂಪತಿ ಸಿಸಿಬಿ ಕಚೇರಿಯಿಂದ ತೆರಳಿದ್ದಾರೆ,

ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ದಿಗಂತ್ ಹಾಗೂ ಐಂದ್ರಿತಾ ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದರು. ಅದರಂತೆ ಸತತ 4 ಗಂಟೆಗಳ ಕಾಲ ಐಂದ್ರಿತಾ ಹಾಗೂ ದಿಗಂತ್ ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ರು. ಇದೀಗ ದಂಪತಿಯ ವಿಚಾರಣೆ ಅಂತ್ಯಗೊಂಡಿರೋದರಿಂದ ಸಿಸಿಬಿ ಕಚೇರಿಯಿಂದ ತೆರಳಿದ್ದಾರೆ. ಸದ್ಯದ ಬೆಳವಣಿಗೆ ಗಮನಿಸಿದ್ರೆ ದಂಪತಿಗೆ ಬಿಗ್ ರಿಲೀಫ್ ಸಿಕ್ಕಿದಂತೆ ಕಾಣಿಸ್ತಿದೆ. ಇನ್ನು ದಿಗಂತ್ ಹಾಗೂ ಐಂದ್ರಿತಾ ಅವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿತ್ತು. ಆದರೆ ಇದೀಗ ಇಬ್ಬರ ವಿಚಾರಣೆ ನಡೆಸಿ ಕಳುಹಿಸಿರೋದು ನೋಡಿದ್ರೆ ಸದ್ಯಕ್ಕೆ ಇಬ್ಬರೂ ಸೇಫ್ ಅಂತಾ ಹೇಳಲಾಗುತ್ತಿದೆ.

- Advertisement -

Latest News

error: Content is protected !!