Saturday, June 13, 2026
Homeತಾಜಾ ಸುದ್ದಿಶೂಟಿಂಗ್ ಗೆ ಚಕ್ಕರ್ ಹಾಕುತ್ತಿದ್ದ ಐಂದ್ರಿತಾ ಪಾರ್ಟಿಗಳಿಗೆ ಫುಲ್ ಪ್ರೆಸೆಂಟ್ ಆಗುತ್ತಿದ್ದ್ಯಾಕೆ?

ಶೂಟಿಂಗ್ ಗೆ ಚಕ್ಕರ್ ಹಾಕುತ್ತಿದ್ದ ಐಂದ್ರಿತಾ ಪಾರ್ಟಿಗಳಿಗೆ ಫುಲ್ ಪ್ರೆಸೆಂಟ್ ಆಗುತ್ತಿದ್ದ್ಯಾಕೆ?

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಐಂದ್ರಿತಾ ಹಾಗೂ ದಿಗಂತ್ ಗೂ ಮುಳುವಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಇಂದು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ದಿಗಂತ್ ಹಾಗೂ ಐಂದ್ರಿತಾ ಗೆ ನೋಟಿಸ್ ಕೂಡ ಕೊಟ್ಟಿದ್ದಾರೆ.

ಇದೆಲ್ಲದರ ಮಧ್ಯೆ ಒಂದೊಂದೇ ಸತ್ಯಗಳು ಹೊರ ಬರುತ್ತಿವೆ. ಐಂದ್ರಿತಾ ಡ್ರಗ್ ಪೆಡ್ಲರ್ ಶೆಕ್ ಫಜಿಲ್ ಜೊತೆ ಇರೋ ಸಾಕಷ್ಟು ಫೋಟೋಗಳು ಈಗಾಗಲೇ ವೈರಲ್ ಆಗಿವೆ. ಇದು ಒಂದಷ್ಟು ಅನುಮಾನಗಳನ್ನು ಹುಟ್ಟು ಹಾಕಿವೆ. ಮತ್ತೊಂದು ಕಡೆ ಐಂದ್ರಿತಾ ಶೂಟಿಂಗ್ ಗಳಿಗೆ ಚಕ್ಕರ್ ಹಾಕುತ್ತಿದ್ದರು. ಶೂಟಿಂಗ್ ಬಂದರೂ ಸರಿಯಾಗಿ ಭಾಗಿಯಾಗುತ್ತಿರಲಿಲ್ಲ. ಇದರಿಂದಾಗಿಯೇ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಮ್ಮಿಯಾದವು ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ. ಅಲ್ಲದೇ ಶೂಟಿಂಗ್ ಮಿಸ್ ಮಾಡಿದ್ರೂ ಐಂದ್ರಿತಾ ಪಾರ್ಟಿಗಳನ್ನು ಮಿಸ್ ಮಾಡುತ್ತಿರಲಿಲ್ಲ ಅನ್ನೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಹಾಗೇ ಬ್ರೆಜಿಲ್ ನ ಟ್ಯುಮಾರೋಲ್ಯಾಂಡ್ ನ ಪಾರ್ಟಿಯಲ್ಲಿ ಐಂದ್ರಿತಾ ಭಾಗಿಯಾಗಿರೋ ಫೋಟೋ ಕೂಡ ವೈರಲ್ ಆಗಿದೆ. ಈ ಪಾರ್ಟಿಗಳಲ್ಲಿ ಡ್ರಗ್ಸ್ ಗಳದ್ದೇ ಕಾರುಬಾರು. ಇದೆಲ್ಲಾ ವಿಚಾರಗಳು ಈಗ ಐಂದ್ರಿತಾಗೆ ಮುಳುವಾಗೋ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

- Advertisement -

Latest News

error: Content is protected !!