Saturday, June 13, 2026
Homeತಾಜಾ ಸುದ್ದಿನರಿಬುದ್ಧಿಯ ಪಾಕ್ ನಿಂದ ಕದನವಿರಾಮ ಉಲ್ಲಂಘನೆ: ಭಾರತೀಯ ಯೋಧ ಹುತಾತ್ಮ

ನರಿಬುದ್ಧಿಯ ಪಾಕ್ ನಿಂದ ಕದನವಿರಾಮ ಉಲ್ಲಂಘನೆ: ಭಾರತೀಯ ಯೋಧ ಹುತಾತ್ಮ

- Advertisement -
- Advertisement -

ಜಮ್ಮುಕಾಶ್ಮೀರ: ನರಿಬುದ್ಧಿಯ ಪಾಕಿಸ್ತಾನ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದೆ. ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿನಿಯಂತ್ರಣ ರೇಖೆಯ ಬಳಿ ಪಾಕ್ ಸೇನೆ ಮಂಗಳವಾರ ತಡರಾತ್ರಿ ಗುಂಡಿನ ದಾಳಿ ನಡೆಸಿದೆ. ಕದನವಿರಾಮ ಉಲ್ಲಂಘಿಸಿ ಗಡಿನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದ್ದರ ಪರಿಣಾಮವಾಗಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಘಟನೆಯಲ್ಲಿ ಸೇನೆಯ ಅಧಿಕಾರಿಯೊಬ್ಬರು ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ವರ್ಷ 2020ರಲ್ಲೇ ಜಮ್ಮು ಪ್ರದೇಶದ ಇಂಡೋ-ಪಾಕ್ ಅಂತರರಾಷ್ಟ್ರೀಯ ಗಡಿಯಲ್ಲಿ 242 ಗಡಿಯಾಚೆಗಿನ ಗುಂಡಿನ ದಾಳಿಗಳು ಸಂಭವಿಸಿವೆ. ಮಂಗಳವಾರ ಮಧ್ಯಾಹ್ನ ಕೂಡ ಪಾಕಿಸ್ಥಾನ ಸೇನೆ ಸುಂದರ್ ಬಾನಿ ಸೆಕ್ಟರ್ ನ ಎಲ್‌ಓಸಿ ಉದ್ದಕ್ಕೂ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸಿತ್ತು.
ಈ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯ ತಕ್ಕ ಉತ್ತರ ನೀಡಿದರೂ ಅಧಿಕಾರಿ ಸೇರಿದಂತೆ ಮೂವರು ಸೈನಿಕರು ಗಾಯಗೊಂಡಿದ್ದರು. ಗಾಯಗೊಂಡ ಯೋಧರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!