Sunday, June 7, 2026
Homeತಾಜಾ ಸುದ್ದಿರಾಗಿಣಿ ಮನೆ ಮಾರಾಟದ ಅಸಲಿ ಕಾರಣ ಬಿಚ್ಚಿಟ್ಟ ಮಾದಕ ನಟಿಯ ತಾಯಿ...

ರಾಗಿಣಿ ಮನೆ ಮಾರಾಟದ ಅಸಲಿ ಕಾರಣ ಬಿಚ್ಚಿಟ್ಟ ಮಾದಕ ನಟಿಯ ತಾಯಿ…

- Advertisement -
- Advertisement -

ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಮನೆಯನ್ನು ಮಾರಾಟ ಮಾಡೋದಕ್ಕೆ ರಾಗಿಣಿ ತಂದೆ ರಾಕೇಶ್ ದ್ವಿವೇದಿ ನಿರ್ಧರಿಸಿದ್ದಾರೆ ಅನ್ನೋ ವಿಚಾರ ಈಗಾಗಲೇ ಹೊರ ಬಿದ್ದಿದೆ. ಮಗಳು ಜೈಲು ಸೇರಿ ಅವಮಾನಕ್ಕೆ ಒಳಗಾದ ಕಾರಣ ರಾಗಿಣಿ ಪೋಷಕರು ಮನೆ ಮಾರಾಟದ ನಿರ್ಧಾರಕ್ಕೆ ಬಂದಿದ್ದಾರೆ ಅಂತಾ ಹೇಳಲಾಗಿತ್ತು. ಆದ್ರೆ ಇದೀಗ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

“ನಮ್ಮ ಮಗಳನ್ನು ಗೌರವಯುತವಾಗಿ ಹೊರಗೆ ಕರೆ ತರಲು ಈ ತೀರ್ಮಾನ ಕೈಗೊಂಡಿದ್ದೇವೆ” ಎಂದಿದ್ದಾರೆ. ಈ ಮೂಲಕ ಖ್ಯಾತ ವಕೀಲರನ್ನು ರಾಗಿಣಿ ಪರ ವಾದ ಮಂಡಿಸಲು ನೇಮಿಸುವ ಸೂಚನೆ ನೀಡಿದ್ದಾರೆ. ಹೀಗಾಗಿ ಸಾಕಷ್ಟು ಹಣದ ಅವಶ್ಯಕತೆ ಇರೋದರಿಂದ ತಮ್ಮ ಮನೆಯನ್ನು ಮಾರಾಟ ಮಾಡುತ್ತಿದ್ದಾರೆ ಅನ್ನೋದು ಅವರ ಮಾತಿನಿಂದಲೇ ಕನ್ಫರ್ಮ್ ಆಗಿದೆ.

- Advertisement -

Latest News

error: Content is protected !!