Saturday, June 13, 2026
Homeತಾಜಾ ಸುದ್ದಿತುಪ್ಪದ ಬೆಡಗಿ ಜೈಲು ಸೇರಿ ಅವಮಾನಕ್ಕೆ ಒಳಗಾದ ಹೆತ್ತವರು, ಕಠಿಣ ನಿರ್ಧಾರಕ್ಕೆ ಬಂದ ರಾಗಿಣಿ ತಂದೆ

ತುಪ್ಪದ ಬೆಡಗಿ ಜೈಲು ಸೇರಿ ಅವಮಾನಕ್ಕೆ ಒಳಗಾದ ಹೆತ್ತವರು, ಕಠಿಣ ನಿರ್ಧಾರಕ್ಕೆ ಬಂದ ರಾಗಿಣಿ ತಂದೆ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಜೈಲು ಸೇರಿದ್ದಾರೆ. ಇತ್ತ ಒಂದಷ್ಟು ಸೆಲೆಬ್ರೆಟಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಹೀಗಿರುವಾಗಲೇ ತುಪ್ಪದ ಬೆಡಗಿಯ ಮನೆಯಲ್ಲಿ ಭಾರೀ ಬೆಳವಣಿಗೆಯೊಂದು ನಡೆದಿದೆ.

ಹೌದು.. ಮಗಳು ಜೈಲಿ ಸೇರಿದ್ದು ರಾಗಿಣಿ ಪೋಷಕರಿಗೆ ಭಾರೀ ಅವಮಾನ ಉಂಟು ಮಾಡಿದೆ. ಹಾಗಾಗಿ ಅವಮಾನ ತಾಳಲಾರದೇ ರಾಗಿಣಿ ತಂದೆ ಮನೆ ಮಾರಾಟಕ್ಕೆ ಮುಂದಾಗಿದ್ದಾರೆ ಅನ್ನೋ ಮಾಹಿತಿ ರಾಗಿಣಿ ಕುಟುಂಬದ ಆಪ್ತ ವಲಯಗಳಿಂದ ಹೊರ ಬಿದ್ದಿದೆ. ಮತ್ತೊಂದು ಕಡೆ ರಾಗಿಣಿ ವಕೀಲ ಖರ್ಚು, ಹಾಗೇ ಕೋರ್ಟ್ , ಕಚೇರಿ ಅಂತಾ ಅಲೆದಾಟಕ್ಕೆ ಹಣದ ಅವಶ್ಯಕತೆ ಇರೋದರಿಂದ 2 ಕೋಟಿ ರೂಪಾಯಿಗೆ ರಾಗಿಣಿ ಮನೆ ಮಾರಾಟ ನಟಿಯ ತಂದೆ ರಾಕೇಶ್ ದ್ವಿವೇದಿ ಮುಂದಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಯಲಹಂಕದ ಜ್ಯುಡಿಶಿಯಲ್ ಬಡಾವಣೆಯಲ್ಲಿರುವ ಅನನ್ಯ ಅಪಾರ್ಟ್ ಮೆಂಟ್ ನಲ್ಲಿರುವ ತಮ್ಮ ಮನೆಯನ್ನು ರಾಗಿಣಿ ಹೆತ್ತವರು ಇದೀಗ ಮಾರಾಟ ಮಾಡೋದಕ್ಕೆ ಮುಂದಾಗಿದ್ದಾರೆ.

- Advertisement -

Latest News

error: Content is protected !!