Saturday, June 6, 2026
HomeUncategorizedಕಡಬ: ಎಡೆಬಿಡದೆ ಸುರಿಯುತ್ತಿರುವ ಮಳೆ, ಚಲಿಸುತ್ತಿದ್ದ ಓಮ್ನಿ ವಾಹನದ ಮೇಲೆ ಬಿದ್ದ ಮರ !

ಕಡಬ: ಎಡೆಬಿಡದೆ ಸುರಿಯುತ್ತಿರುವ ಮಳೆ, ಚಲಿಸುತ್ತಿದ್ದ ಓಮ್ನಿ ವಾಹನದ ಮೇಲೆ ಬಿದ್ದ ಮರ !

- Advertisement -
- Advertisement -

ಕಡಬ: ಎಡೆಬಿಡದೆ ಸುರಿಯುತ್ತಿದ್ದ ಮಳೆಗೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕೊಯಿಲ ಸಮೀಪದ ನೀರಾಜೆ ಎಂಬಲ್ಲಿ ಚಲಿಸುತ್ತಿದ್ದ ಓಮ್ನಿಯ ಮೇಲೆ ಮರವೊಂದು ಮುರಿದು ಬಿದ್ದ ಪರಿಣಾಮ ಓಮ್ನಿ ಜಖಂಗೊಂಡ ಘಟನೆ ಇಂದು ನಡೆದಿದೆ.

ಕೊಯಿಲದಿಂದ ಆತೂರಿಗೆ ಕೊಯಿಲ ಶ್ರೀರಾಮ ಎಲೆಕ್ಟ್ರಿಕಲ್ಸ್‌ನ ಮಾಲಕ ಯೋಗೀಶ್‌ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಓಮ್ನಿ ಕಾರಿನ ಮೇಲೆಯೇ ಕೊಯಿಲ ನೀರಾಜೆ ಸಮೀಪ ರಸ್ತೆ ಬದಿಯಲ್ಲಿದ್ದ ಹಲಸಿನ ಮರವೊಂದು ಮರ ಮುರಿದು ಬಿದ್ದಿದೆ. ಆದರೆ ಅದೃಷ್ಟ ಎಂಬಂತೆ ಘಟನೆಯಲ್ಲಿ ಚಾಲಕ ಯಾವುದೇ ರೀತಿಯ ಪ್ರಾಣಹಾನಿ ಆಗದೆ ಪಾರಾಗಿದ್ದಾರೆ.

ಘಟನೆಯಲ್ಲಿ ಓಮ್ನಿ ಜಖಂಗೊಂಡಿದ್ದು ಚಾಲಕ ಯೋಗೀಶ್‌ರವರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮರ ರಸ್ತೆಗೆ ಮುರಿದು ಬಿದ್ದ ಪರಿಣಾಮ ಸುಮಾರು ಅರ್ಧತಾಸು ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳೀಯರು ಮರ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

- Advertisement -

Latest News

error: Content is protected !!