Tuesday, April 23, 2024
Homeತಾಜಾ ಸುದ್ದಿನಾನು ಕೊಲಂಬೋಗೆ ಹೋಗಿದ್ದು ನಿಜ: ಕೊನೆಗೂ ಸತ್ಯ ಒಪ್ಪಿಕೊಂಡ ಶಾಸಕ ಜಮೀರ್

ನಾನು ಕೊಲಂಬೋಗೆ ಹೋಗಿದ್ದು ನಿಜ: ಕೊನೆಗೂ ಸತ್ಯ ಒಪ್ಪಿಕೊಂಡ ಶಾಸಕ ಜಮೀರ್

spot_img
- Advertisement -
- Advertisement -

ಬೆಂಗಳೂರು: ಕಾಂಗ್ರೆಸ್ ನಾಯಕ ಮತ್ತು ಶಾಸಕ ಜಮೀರ್ ಅಹ್ಮದ್ ಅವರು ಕೊಲಂಬೋಗೆ ತೆರಳಿದ್ದರು ಎಂಬ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಮಾತಿಗೆ ಶಾಸಕ ಜಮೀರ್ ಅಹ್ಮದ್ ಉಲ್ಟಾ ಹೊಡೆದಿದ್ದರು. ನನ್ನ ಮೇಲಿನ ಆರೋಪ ಸಾಭೀತಾದ್ರೇ ನನ್ನ ಇಡೀ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುವುದಾಗಿಯೂ ಶಾಸಕ ಜಮೀರ್ ಸವಾಲ್ ಹಾಕಿದ್ದರು. ಇದರ ಮಧ್ಯೆ.. ನಾನು ಕೊಲಂಬೋಗೆ ಹೋಗಿದ್ದು ನಿಜ. ಯಾಕೆ ಹೋಗ್ಬಾರ್ದು ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಕೊನೆಗೂ ಸತ್ಯವನ್ನು ಶಾಸಕ ಜಮೀರ್ ಅಹ್ಮದ್ ಒಪ್ಪಿಕೊಂಡಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಶಾಸಕ ಜಮೀರ್ ಅಹ್ಮದ್, ನಾನು ಕೊಲೊಂಬೊಗೆ ಹೋಗಿದ್ದು ನಿಜ. ಅಲ್ಲಿನ ಕ್ಯಾಸಿನೊಗೂ ಹೋಗಿದ್ದೆ. ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೆ ಹೋಗಿದ್ದೆ.. ಅದಲ್ಲದೇ ವರ್ಷ, ಒಂದೂವರೆ ವರ್ಷಕ್ಕೊಮ್ಮೆ ಕೊಲಂಬೋಗೆ ಹೋಗ್ತಾ ಇರುತ್ತೇನೆ. ಯಾಕೆ ಹೋಗ್ಬಾರ್ದಾ..? ಎಂಬುದಾಗಿ ಹೇಳುವ ಮೂಲಕ, ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಕಾನೂನುಬದ್ಧವಾಗಿ ನಡೆಯುವ ಕ್ಯಾಸಿನೊಗೆ ಹೋಗುವುದು ತಪ್ಪಾ? ಆದರೆ ನಟಿ ಸಂಜನಾ ಜೊತೆ ಹೋಗಿಲ್ಲ. ಒಂದು ವೇಳೆ ನಾನು ಸಂಜನಾ ಸಂಪರ್ಕ ಹೊಂದಿದ್ದು ಅಥವಾ ಡ್ರಗ್ಸ್ ನಂಟಿನ ಜೊತೆ ಸಂಪರ್ಕ ಹೊಂದಿದ್ದು ಸಾಬೀತಾದರೆ ಮೊದಲೇ ಹೇಳಿದಂತೆ ನನ್ನ ಆಸ್ತಿಯನ್ನೆಲ್ಲಾ ಬರೆದುಕೊಡುತ್ತೇನೆ. ಅಲ್ಲದೇ ಗಲ್ಲಿಗೆ ಹಾಕುವಂತೆ ನ್ಯಾಯಮೂರ್ತಿಗಳಿಗೆ ನಾನೇ ಪತ್ರ ಬರೆದು ಕೊಡುತ್ತೇನೆ ಎಂದು ಸವಾಲು ಹಾಕಿದರು.

- Advertisement -
spot_img

Latest News

error: Content is protected !!