Thursday, August 20, 2026
Homeಕರಾವಳಿಕಿನ್ನಿಗೋಳಿ: ಶಾಂಭವಿ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕ ಸಾವು, ಇಬ್ಬರ ರಕ್ಷಣೆ

ಕಿನ್ನಿಗೋಳಿ: ಶಾಂಭವಿ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕ ಸಾವು, ಇಬ್ಬರ ರಕ್ಷಣೆ

- Advertisement -
- Advertisement -

ಮಂಗಳೂರು: ತಾಲ್ಲೂಕಿನ ಕಿನ್ನಿಗೋಳಿ ಸಮೀಪದ ಕರ್ನಿರೆಯಲ್ಲಿ ಭಾನುವಾರ ಶಾಂಭವಿ ನದಿಗೆ ಈಜಲು ಇಳಿದಿದ್ದ ಮೂವರು ಯುವಕರ ಪೈಕಿ ಒಬ್ಬ ಮೃತಪಟ್ಟಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ‌

ಬೆಂಗಳೂರಿನ ಅನಿಲ್ (32) ಮೃತಪಟ್ಟ ಯುವಕ. ಬೆಂಗಳೂರಿನಿಂದ ಬಂದಿದ್ದ ಏಳು ಮಂದಿ ಯುವಕರ ಪೈಕಿ ಮೂವರು ಕರ್ನಿರೆ ಬಳಿ ಶಾಂಭವಿ ನದಿಯಲ್ಲಿ ಈಜಲು ಇಳಿದಿದ್ದರು. ಮೂವರೂ ನದಿ ನೀರಿನ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ನೆರವಿಗೆ ಬಂದಿದ್ದು, ಇಬ್ಬರನ್ನು ಸ್ಥಳಿಯರು ರಕ್ಷಿಸಲು ಸಾಧ್ಯವಾಗಿದೆ.

ಮೂಲ್ಕಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!