Sunday, April 28, 2024
Homeಕ್ರೀಡೆಕೊನೆಗೂ ಐಪಿಎಲ್ ವೇಳಾಪಟ್ಟಿ ಪ್ರಕಟ; RCB ಮ್ಯಾಚ್ ಇರೋದು ಯಾವಾಗ..?

ಕೊನೆಗೂ ಐಪಿಎಲ್ ವೇಳಾಪಟ್ಟಿ ಪ್ರಕಟ; RCB ಮ್ಯಾಚ್ ಇರೋದು ಯಾವಾಗ..?

spot_img
- Advertisement -
- Advertisement -

ಯುಎಇ: 2020ರ ಐಪಿಎಲ್ ವೇಳಾಪಟ್ಟಿ ಪ್ರಕಟವಾಗಿದೆ. ಸೆಪ್ಟೆಂಬರ್ 19ರಂದು ಅಬುದಾಬಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸಂಪ್ರಾದಯದಂತೆ ಕಳೆದ ಟೂರ್ನಿಯಲ್ಲಿ ಫೈನಲ್ ಆಡಿದ್ದ ಮುಂಬೈ ಇಂಡಿಯನ್ಸ್ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಆಡಲಿವೆ. ನಂತರ ಎರಡನೇ ಪಂದ್ಯದಲ್ಲಿ ಡೆಲ್ಲಿ ಮತ್ತು ಪಂಜಾಬ್ ತಂಡಗಳು ಮುಖಾಮುಖಿಯಾಗಲಿದ್ದು, ಮೂರನೇ ಪಂದ್ಯ ಆರ್‌ಸಿಬಿ ಮತ್ತು ಹೈದರಾಬಾದ್ ತಂಡಗಳ ನಡುವೆ ನಡೆಯಲಿದೆ.

ಉಳಿದಂತೆ ಸೆಪ್ಟೆಂಬರ್ 24ರಂದು ಪಂಜಾಬ್, ಸೆಪ್ಟೆಂಬರ್ 28ರಂದು ಮುಂಬೈ, ಅಕ್ಟೋಬರ್ 3ರಂದು ರಾಜಸ್ಥಾನ, ಅ. 5ರಂದು ದೆಹಲಿ, ಅ. 10ರಂದು ಚೆನ್ನೈ, ಅ.12ರಂದು ಕೋಲ್ಕತ್ತಾ, ಅ.15ರಂದು ಪಂಜಾಬ್, ಅ. 17ರಂದು ರಾಜಸ್ಥಾನ, ಅ.21ರಂದು ಕೋಲ್ಕತ್ತಾ, ಅ.25ರಂದು ಚೆನ್ನೈ, ಅ.28ರಂದು ಮುಂಬೈ, ಅ.31ರಂದು ಹೈದರಾಬಾದ್, ನವೆಂಬರ್ 2ರಂದು ದೆಹಲಿ ತಂಡಗಳನ್ನ ಕೊಹ್ಲಿ ನಾಯಕತ್ವದ ಆರ್​ಸಿಬಿ ಎದುರಿಸಲಿದೆ.

ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.

- Advertisement -
spot_img

Latest News

error: Content is protected !!