Thursday, August 20, 2026
Homeಕರಾವಳಿಮಂಗಳೂರುಬೆಳ್ತಂಗಡಿ :ನ್ಯಾಯಬೆಲೆ ಅಂಗಡಿಯಲ್ಲಿ ಕಳಪೆ ಮಟ್ಟದ ಅಕ್ಕಿ ವಿತರಣೆ ವರದಿ ಬೆನ್ನಲ್ಲೇ ಆಹಾರ ಇಲಾಖೆ ಪರಿಶೀಲನೆ

ಬೆಳ್ತಂಗಡಿ :ನ್ಯಾಯಬೆಲೆ ಅಂಗಡಿಯಲ್ಲಿ ಕಳಪೆ ಮಟ್ಟದ ಅಕ್ಕಿ ವಿತರಣೆ ವರದಿ ಬೆನ್ನಲ್ಲೇ ಆಹಾರ ಇಲಾಖೆ ಪರಿಶೀಲನೆ

- Advertisement -
- Advertisement -

ಬೆಳ್ತಂಗಡಿ : ಸರಕಾರ ಅನ್ನಭಾಗ್ಯ ಯೋಜನೆಯ ಮೂಲಕ ಬಡವರ ಹಸಿವು ನೀಗಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರತಿ ತಿಂಗಳು ಪಡಿತರ ವಿತರಣೆ ಮಾಡುವ ಅಕ್ಕಿಯೂ ಕಳಪೆ ಗುಣಮಟ್ಟದಲ್ಲಿ ಪತ್ತೆಯಾದ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿ ಮಾಡಿದ ಬೆನ್ನಲ್ಲೇ ಬೆಳ್ತಂಗಡಿ ಆಹಾರ ಇಲಾಖೆಯ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿ ಮಹಜರು ನಡೆಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮ ನ್ಯಾಯಬೆಲೆ ಅಂಗಡಿಯಲ್ಲಿ ಆಗಸ್ಟ್ 19 ರಂದು ಬೆಳಗ್ಗೆ ಲಾರಿ ಪೂರ್ತಿ ಸರಕಾರದ ಪಡಿತರ ಅಕ್ಕಿ ಬಂದಿದ್ದು ನಿಡ್ಲೆ ಗ್ರಾಮದ ಪಡಿತರ ಕೇಂದ್ರದಲ್ಲಿ ಅಂದಾಜು 50 ರಿಂದ 100 ಗೋಣಿ ಅಕ್ಕಿಯನ್ನು ಅನ್‌ಲೋಡ್ ಮಾಡಿ ತೆರಳಿದ್ದಾರೆ. ನಿಡ್ಲೆ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ನಾಗರಿಕರು ಅಕ್ಕಿ ಬಂದ ಖುಷಿಯಲ್ಲಿ ಸ್ಥಳಕ್ಕೆ ಬಂದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು.ಅಕ್ಕಿ ಸಂಪೂರ್ಣವಾಗಿ ಹಾಳಾಗಿ ಅದರಲ್ಲಿ ಹುಳ ಆಗಿರುವುದು ಕಂಡು ಬಂತು. ಸ್ಥಳೀಯರು ಹೇಳುವ ಪ್ರಕಾರ ಈ ಅಕ್ಕಿಯನ್ನು ಪ್ರಾಣಿಗಳಿಗೆ ನೀಡಲು ಕೂಡಾ ಯೋಗ್ಯವಾಗಿಲ್ಲ ಅಷ್ಟು ಕೆಟ್ಟು ಹೋಗಿದೆ ಎನ್ನಲಾಗಿದೆ.

ಬೆಳ್ತಂಗಡಿ ಆಹಾರ ಇಲಾಖೆ ಆಹಾರ ಶಿರಸ್ಥೆದಾರ್ ಸಂತೋಷ್ ಮತ್ತು ಆಹಾರ ನಿರೀಕ್ಷಕರು ವಿಶ್ವ.ಕೆ ಆ.20 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಂಗಳೂರು (FCI) ಭಾರತೀಯ ಆಹಾರ ನಿಗಮ ಗೋಡೌನಿಂದ ಬಂದ ಅಕ್ಕಿಗಳ ಲೋಡಿನಲ್ಲಿ 6 ಗೋಣೆಯಲ್ಲಿ ಕಳಪೆ ಗುಣಮಟ್ಟದ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿಯನ್ನು ವಿತರಿಸದಂತೆ ಸೂಚನೆ ನೀಡಿದ ಅಧಿಕಾರಿಗಳು. ಈ ಬಗ್ಗೆ ಮಹಜರು ಮಾಡಿ ಮಂಗಳೂರು ಆಹಾರ ನಾಗರಿಕರ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಹೇಮಲತಾ ಅವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!