- Advertisement -
- Advertisement -
ಬೆಳ್ತಂಗಡಿ: ಸವಣಾಲು ಗ್ರಾಮದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ ಕಾಳಿಬೆಟ್ಟದಲ್ಲಿ ಈ ವರ್ಷದ ನವರಾತ್ರಿ ಉತ್ಸವವು ಅಕ್ಟೋಬರ್ 11 ರಿಂದ 20 ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.
ಉತ್ಸವದ ಪ್ರತಿದಿನ ಕ್ಷೇತ್ರದಲ್ಲಿ ಚಂಡಿಕಾಹೋಮ, ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಜರಗಲಿದೆ.
ಉತ್ಸವದ ಮುಖ್ಯ ದಿನಗಳ ವಿವರ:
- ಅಕ್ಟೋಬರ್ 17 (ಶನಿವಾರ): ಶ್ರೀ ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮ.
- ಅಕ್ಟೋಬರ್ 18 (ರವಿವಾರ): ಬೆಳಿಗ್ಗೆ 9:00 ಗಂಟೆಗೆ ಶ್ರೀ ಕಾಳಿಗುಡಿಯಲ್ಲಿ ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ಅಷ್ಟಾವಧಾನ, ರಂಗಪೂಜೆ, ವಾಹನ ಪೂಜೆ.
- ಅಕ್ಟೋಬರ್ 19 (ಸೋಮವಾರ): ಸಂಜೆ 5:00 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ ರಾತ್ರಿ ಅಷ್ಟಾವಧಾನ ಸೇವೆ, ಹೂವಿನ ಪೂಜೆ ಮತ್ತು ರಂಗಪೂಜೆ.
- ಅಕ್ಟೋಬರ್ 20 (ಮಂಗಳವಾರ): ಸಾರ್ವಜನಿಕ ಚಂಡಿಕಾಹೋಮ ಮತ್ತು ಮಹಾ ಅನ್ನಸಂತರ್ಪಣೆ.

ವಿಶೇಷ ಸೇವೆಗಳ ವಿವರ ಹಾಗೂ ನೋಂದಣಿ:
- ಸಾರ್ವಜನಿಕ ಚಂಡಿಕಾಹೋಮ (₹500): ಭಾಗವಹಿಸಲಿಚ್ಛಿಸುವ ಭಕ್ತಾದಿಗಳು ಅಕ್ಟೋಬರ್ 20 ರ ಬೆಳಿಗ್ಗೆ 11:00 ಗಂಟೆಯ ಒಳಗೆ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
- ರಂಗಪೂಜೆ ಸೇವೆ: ವಿಶೇಷ ರಂಗಪೂಜೆ (₹1,500) ಮಾಡಿಸುವವರು ಮುಂಚಿತವಾಗಿ ಕಚೇರಿಯಲ್ಲಿ ಮಾಹಿತಿ ನೀಡಬೇಕಾಗಿದ್ದು, ಸಾರ್ವಜನಿಕ ರಂಗಪೂಜೆಗೆ ₹1,000 ಶುಲ್ಕ ನಿಗದಿಪಡಿಸಲಾಗಿದೆ.
- ಸಪ್ತಶತಿ ಪಾರಾಯಣ (₹500): ಸೇವೆಯನ್ನು ಬಯಸುವ ಭಕ್ತರು ಕ್ಷೇತ್ರದ ಕಚೇರಿಯಲ್ಲಿ ರಶೀದಿ ಪಡೆಯಬಹುದು.
- ಹಸಿರುವಾಣಿ ಕಾಣಿಕೆ: ತರಕಾರಿ, ಕುಂಬಳಕಾಯಿ, ತೆಂಗಿನಕಾಯಿ, ಬಾಳೆ ಎಲೆ, ವೀಳ್ಯದೆಲೆ, ಅಡಿಕೆ ಹಾಗೂ ಹೋಮದ ಸಾಮಗ್ರಿಗಳನ್ನು ಹಸಿರುವಾಣಿಯಾಗಿ ಸ್ವೀಕರಿಸಲಾಗುವುದು.
ನವರಾತ್ರಿ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಸಂಸ್ಥಾಪಕರು, ಆಡಳಿತ ಸಮಿತಿ, ಅರ್ಚಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ವಿನಂತಿಸಿದ್ದಾರೆ.
- Advertisement -


