Thursday, June 4, 2026
Homeತಾಜಾ ಸುದ್ದಿಸಂಜನಾ ಹಾಗೂ ಶಾಸಕ ಜಮೀರ್ ಅಹ್ಮದ್ ಗೂ ಏನು ಸಂಬಂಧ? ಪ್ರಶಾಂತ್ ಸಂಬರಗಿ ಹೊಸ ಬಾಂಬ್

ಸಂಜನಾ ಹಾಗೂ ಶಾಸಕ ಜಮೀರ್ ಅಹ್ಮದ್ ಗೂ ಏನು ಸಂಬಂಧ? ಪ್ರಶಾಂತ್ ಸಂಬರಗಿ ಹೊಸ ಬಾಂಬ್

- Advertisement -
- Advertisement -

ಬೆಂಗಳೂರು : ಜೂನ್ 8, 2019ರಂದು ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ನಟಿ ಸಂಜನಾ ಕೊಲಂಬೋದ ಕ್ಯಾಸಿನೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ನನ್ನ ಬಗ್ಗೆ ಟೀಕಿಸುವ ನಟಿ ಸಂಜಾ ಗಲ್ರಾನಿಯವರು ಈ ಬಗ್ಗೆ ಹೇಳ್ಬೇಕು ಎಂಬುದಾಗಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ನಟಿ ಸಂಜನಾ ನಡುವಿನ ನಂಟೇನು.? ನನ್ನ ಪ್ರಶ್ನೆಗೆ ಸಂಜನಾ ಗಲ್ರಾನಿ ಉತ್ತರಿಸಲಿ. 2019ರಲ್ಲಿ ಶ್ರೀಲಂಕಾಗೆ ಜಮೀರ್, ಸಂಜನಾ ಭೇಟಿ ಮಾಡಿದ್ದರು. 2019ರ ಜೂನ್ 8ರಂದು ಇಬ್ಬರೂ ಕೊಲಂಬೋಗೆ ಭೇಟಿ ಮಾಡಿದ್ದರು. ಕೊಲಂಬೋದ ಕ್ಯಾಸಿನೋದಲ್ಲಿ ಇಬ್ಬರು ಭಾಗಿಯಾಗಿದ್ದರು. ಶಾಸಕರು ಅಪಾರ ಹಣ ಕಳೆದುಕೊಂಡಿದ್ದಾರೆ. ನನ್ನ ಹಿತೈಷಿಗಳೇ ಅವರಿಬ್ಬರನ್ನು ನೋಡಿದ್ದಾರೆ ಎಂಬುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಡ್ರಗ್ಸ್ ದಂಧೆ ಬಗ್ಗೆ ಅಷ್ಟೇ ತನಿಖೆ ನಡೆಸುವ ಜೊತೆಗೆ, ಪ್ರಕರಣದ ಬಗ್ಗೆ ಐಟಿ, ಇಡಿಯಿಂದಲೂ ತನಿಖೆ ಆಗಲಿ. ಎಲ್ಲಾ ವಿಚಾರವೂ ಹೊರಗೆ ಬರಲಿ ಎಂಬುದಾಗಿ ಪ್ರಶಾಂತ್ ಸಂಬರಗಿ ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!