Thursday, June 4, 2026
Homeತಾಜಾ ಸುದ್ದಿVIP ಗಳ ಭೇಟಿಗೆಂದೇ ಪ್ರತ್ಯೇಕ ಫ್ಲಾಟ್ ಹೊಂದಿದ್ದ 'ಮಾದಕ' ನಟಿ ರಾಗಿಣಿ!

VIP ಗಳ ಭೇಟಿಗೆಂದೇ ಪ್ರತ್ಯೇಕ ಫ್ಲಾಟ್ ಹೊಂದಿದ್ದ ‘ಮಾದಕ’ ನಟಿ ರಾಗಿಣಿ!

- Advertisement -
- Advertisement -

ಬೆಂಗಳೂರು: ಯಲಹಂಕದಲ್ಲಿರುವ ರಾಗಿಣಿ ನಿವಾಸದ ಮೂಲೆ ಮೂಲೆಯನ್ನೂ ಸಿಸಿಬಿ ಪೊಲೀಸರು ಶೋಧಿಸುತ್ತಿದ್ದು, ಆಕೆಯ ಕಾರನ್ನೂ ಸಹ ಬಿಟ್ಟಿಲ್ಲ. ರಾಗಿಣಿಯವರ ನಾಲ್ಕು ಮೊಬೈಲ್‌ ಫೋನ್‌, ಎರಡು ಲ್ಯಾಪ್‌ ಟಾಪ್‌ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದ್ದು, ಅದರಲ್ಲಿರುವ ಮಾಹಿತಿಯ ಪರಿಶೀಲನೆ ನಡೆಸಲಾಗುತ್ತಿದೆ.

ಮಹತ್ವದ ಸಂಗತಿಯೆಂದರೆ ರಾಗಿಣಿ ಇಂದಿರಾನಗರದಲ್ಲಿ ಮತ್ತೊಂದು ಫ್ಲಾಟ್‌ ಹೊಂದಿದ್ದು, ಇದನ್ನು ವಿಐಪಿಗಳನ್ನು ಭೇಟಿ ಮಾಡಲು ಮಾತ್ರ ಬಳಸುತ್ತಿದ್ದರೆನ್ನಲಾಗಿದೆ. ಸ್ನೇಹಿತ ಸಿಕ್ಕಿಬಿದ್ದರೆ ನನ್ನನ್ಯಾಕೆ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದ ರಾಗಿಣಿಗೆ ಈಗ ಸಿಸಿಬಿ ದಾಳಿ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ರವಿಶಂಕರ್‌ ನೀಡಿರುವ ಮಹತ್ವದ ಮಾಹಿತಿಗಳನ್ನಾಧರಿಸಿ ರಾಗಿಣಿಯನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!