Saturday, June 6, 2026
Homeತಾಜಾ ಸುದ್ದಿ12ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆದ ಬಾಲಕಿಯರಿಗೆ ಸ್ಕೂಟಿ ನೀಡಲು ನಿರ್ಧಾರ

12ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆದ ಬಾಲಕಿಯರಿಗೆ ಸ್ಕೂಟಿ ನೀಡಲು ನಿರ್ಧಾರ

- Advertisement -
- Advertisement -

ಗುವಾಹಟಿ: ಹೈಯರ್ ಸೆಕೆಂಡರಿ ಎಜುಕೇಶನ್ ಕೌನ್ಸಿಲ್ ಅಡಿಯಲ್ಲಿ 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಜ್ಯದ ಬಾಲಕಿಯರಿಗೆ ಸ್ಕೂಟಿ ನೀಡಲು ಅಸ್ಸಾಂ ರಾಜ್ಯ ಸರ್ಕಾರ ನಿರ್ಧರಿಸಿದೆ.

ಸುಮಾರು 22,000 ವಿದ್ಯಾರ್ಥಿಗಳಿಗೆ ‘ಪ್ರಜ್ಞಾನ್ ಭಾರತಿ’ ಯೋಜನೆಯಡಿ ಸ್ಕೂಟಿ ವಿತರಣೆ ನಡೆಯುತ್ತಿದೆ ಎಂದು ರಾಜ್ಯದ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಪ್ರತಿ ಸ್ಕೂಟಿಗೆ ಬಜೆಟ್ 50,000 ರಿಂದ 55,000 ಎಂದು ನಿಗದಿಪಡಿಸಲಾಗಿದೆ. ಮೂರು ವರ್ಷಗಳ ಮೊದಲು ಫಲಾನುಭವಿಗಳಿಗೆ ತಮ್ಮ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಅಸ್ಸಾಂ ಕ್ಲಾಸ್ 12 ಫಲಿತಾಂಶವನ್ನು ಜೂನ್ 25, 2020 ರಂದು ಘೋಷಿಸಲಾಯಿತು. ಈ ವರ್ಷ ಹಾಜರಾದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 1,68,367 ವಿದ್ಯಾರ್ಥಿಗಳಲ್ಲಿ 78.28%. ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

- Advertisement -

Latest News

error: Content is protected !!