Sunday, August 30, 2026
Homeತಾಜಾ ಸುದ್ದಿಭಾರತ ವಿರೋಧಿ ಟರ್ಕಿ ಅಧ್ಯಕ್ಷರ ಪತ್ನಿ ಜತೆ ಭೇಟಿ: ನಟ ಅಮೀರ್ ಖಾನ್ ಮತ್ತೊಂದು ವಿವಾದ

ಭಾರತ ವಿರೋಧಿ ಟರ್ಕಿ ಅಧ್ಯಕ್ಷರ ಪತ್ನಿ ಜತೆ ಭೇಟಿ: ನಟ ಅಮೀರ್ ಖಾನ್ ಮತ್ತೊಂದು ವಿವಾದ

- Advertisement -
- Advertisement -

ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ವಿರುದ್ಧ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಯಾಕಂದ್ರೆ, ಆಗಸ್ಟ್ 15 ರಂದು.. ಭಾರತದ ಸ್ವಾತಂತ್ರ ದಿನಾಚರಣೆಯಂದು ಟರ್ಕಿಯ ಮೊದಲ ಮಹಿಳೆ ಎಮೈನ್ ಎರ್ಡೋಗನ್ ರನ್ನ ಆಮೀರ್ ಖಾನ್ ಭೇಟಿ ಮಾಡಿದ್ದಾರೆ. ಇದೇ ವಿಚಾರಕ್ಕೆ ಆಮೀರ್ ಖಾನ್ ವಿವಾದಕ್ಕೀಡಾಗಿದ್ದಾರೆ.

ಆಮೀರ್ ಖಾನ್ ಭೇಟಿಯಾದ ವಿಷಯವನ್ನು ಟರ್ಕಿ ಮೊದಲ ಮಹಿಳೆ ಎಮೈನ್ ಎರ್ಡೋಗನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

“ವಿಶ್ವ ಪ್ರಸಿದ್ಧ ಭಾರತೀಯ ನಟ, ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಆಮೀರ್ ಖಾನ್ ಅವರನ್ನು ಭೇಟಿಯಾಗಿದ್ದು ನನಗೆ ತುಂಬಾ ಸಂತೋಷವಾಯಿತು. ಆಮೀರ್ ಖಾನ್ ತಮ್ಮ ಚಿತ್ರ ಲಾಲಾ ಸಿಂಗ್ ಚಡ್ಡಾ ಚಿತ್ರದ ಚಿತ್ರೀಕರಣವನ್ನು ಟರ್ಕಿಯ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಸಂತೋಷವಾಯಿತು” ಎಂದಿದ್ದಾರೆ ಎಮೈನ್ ಎರ್ಡೋಗನ್.

”ಟರ್ಕಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಿದೆ. ಕಾಶ್ಮೀರ ವಿಚಾರದಲ್ಲಿ ಟರ್ಕಿ ಮೂಗು ತೂರಿಸುತ್ತಿದೆ. ಹೀಗಿರುವಾಗ ಟರ್ಕಿ ಮೊದಲ ಮಹಿಳೆಯನ್ನು ಆಮೀರ್ ಖಾನ್ ಮಾಡಿರುವುದು ಸರಿ ಅಲ್ಲ” ಎಂಬುದು ನೆಟ್ಟಿಗರ ಅಭಿಪ್ರಾಯ.

ಮಿತ್ರರಾಷ್ಟ್ರವಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಭಾರತಕ್ಕೆ ಬಂದಾಗ ಅಮೀರ್,​ ಅವರನ್ನು ಭೇಟಿಯಾಗಲು ಬಂದಿರಲಿಲ್ಲ. ಆದರೆ ಈಗ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿರದ ಟರ್ಕಿ ದೇಶಕ್ಕೆ ಶೂಟಿಂಗ್​ಗೆ ಹೋಗಿರುವುದು ಮಾತ್ರವಲ್ಲದೇ, ಆ ರಾಷ್ಟ್ರದ ಪ್ರಥಮ ಮಹಿಳೆಯನ್ನೂ ಭೇಟಿಯಾಗಿದ್ದಾರಲ್ಲ ಅಂತ ಅಮೀರ್ ಖಾನ್​ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

- Advertisement -

Latest News

error: Content is protected !!