Saturday, June 6, 2026
Homeಕರಾವಳಿಮಂಗಳೂರುಅರಂತೋಡು ಪೋಸ್ಟ್ ಮ್ಯಾನ್ ಕುಟುಂಬದಲ್ಲಿ ಎಲ್ಲರಿಗೂ ಕೊರೊನಾ ಪಾಸಿಟಿವ್

ಅರಂತೋಡು ಪೋಸ್ಟ್ ಮ್ಯಾನ್ ಕುಟುಂಬದಲ್ಲಿ ಎಲ್ಲರಿಗೂ ಕೊರೊನಾ ಪಾಸಿಟಿವ್

- Advertisement -
- Advertisement -

ಅರಂತೋಡು : ಕೊರೊನಾದ ಆರ್ಭಟ ಸದ್ಯಕ್ಕಂತೂ ನಿಲ್ಲುವ ಯಾವ ಲಕ್ಷಣಗಳು ಎಲ್ಲೂ ಕಾಣುತ್ತಿಲ್ಲ. ದಿಲ್ಲಿಯಿಂದ ಹಿಡಿದು ಹಳ್ಳಿವರೆಗೂ ಎಂಬಂತೆ ಕುಗ್ರಾಮಗಳಲ್ಲೂ ಹೆಮ್ಮಾರಿ ಸದ್ದು ಜೋರಾಗಿದೆ. ಇದೀಗ ಸುಳ್ಯ ತಾಲೂಕು ಅರಂತೋಡಿನ ಪೋಸ್ಟ್ ಮ್ಯಾನ್ ಕುಟಂಬದಲ್ಲಿ ಎಲ್ಲರಿಗೂ ಕೋವಿಡ್ ಸೋಂಕು ದೃಢಪಟ್ಟಿರೋದು ಆತಂಕಕ್ಕೆ ಕಾರಣವಾಗಿದೆ.

ಪೋಸ್ಟ್ ಮ್ಯಾನ್ ಹಾಗೇ ಅವರ ಪತ್ನಿ, ಮೂವರು ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಹಾಗಾಗಿ ಪೋಸ್ಟ್ ಆಫೀಸ್ ನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ಅರಂತೋಡು ಪೇಟೆಯನ್ನು ಸ್ಯಾನಿಟೈಸ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಪೋಸ್ಟ್ ಮ್ಯಾನ್ ಅವರ ತಾಯಿ ಇತ್ತೀಚೆಗೆ ತೀರಿಕೊಂಡಿದ್ರು. ಹಾಗಾಗಿ 16ರ ಕಾರ್ಯಕ್ರಮ ಆಗಸ್ಟ್ 15 ರಂದು ನಡೆದಿತ್ತು. ಅಂದು ರಾತ್ರಿ ಸಂಪ್ರದಾಯದಂತೆ ಅವರು ಮರ್ಕಂಜದಲ್ಲಿರುವ ತಮ್ಮ ಮಾವನ ಮನೆಗೆ ತೆರಳಿದ್ದರು. ಅಂದೇ ವಾಪಾಸ್ ಕೂಡ ಬಂದಿದ್ದರು. ಆದರೆ ನಿನ್ನೆ ವಾಂತಿ ಹಾಗೂ ಜ್ವರ ಕಾಣಿಸಿಕೊಂಡಿತ್ತು. ಇಂದು ಬೆಳಿಗ್ಗೆ ವೈದ್ಯರಲ್ಲಿಗೆ ತೆರಳಿದಾಗ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಆ ಕೊರೊನಾ ಪಾಸಿಟಿವ್ ಇರೋದು ಗೊತ್ತಾಗಿದೆ. ಜೊತೆಗೆ ಪತ್ನಿ ಹಾಗೂ ಮಕ್ಕಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೂ ಸೋಂಕು ದೃಢಪಟ್ಟಿದೆ.

ಸದ್ಯ ಐವರು ಅವರ ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಹಾಗೇ 16 ರ ಕಾರ್ಯಕ್ರಮದಲ್ಲಿ ಭಾಗಿಯಾದವರೆಲ್ಲರಿಗೂ ಕ್ವಾರಂಟೈನ್ ಆಗುವಂತೆ ಪಿಡಿಓ ತಿಳಿಸಿದ್ದಾರೆ.

- Advertisement -

Latest News

error: Content is protected !!