Thursday, November 26, 2026
Homeಕರಾವಳಿಮಂಗಳೂರುಮಂಗಳೂರು:ಬೈಕಂಪಾಡಿಯಿಂದ 15 ವರ್ಷದ ಬಾಲಕಿ ನಾಪತ್ತೆ: ಪತ್ತೆಗೆ ಸಹಕರಿಸಲು ಪೊಲೀಸರ ಮನವಿ

ಮಂಗಳೂರು:ಬೈಕಂಪಾಡಿಯಿಂದ 15 ವರ್ಷದ ಬಾಲಕಿ ನಾಪತ್ತೆ: ಪತ್ತೆಗೆ ಸಹಕರಿಸಲು ಪೊಲೀಸರ ಮನವಿ

- Advertisement -
- Advertisement -

ಕಳೆದ ಐದು ತಿಂಗಳಿನಿಂದ ಬೈಕಂಪಾಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಾಲಕಿ, ನವೆಂಬರ್ 21ರಂದು ಮನೆಯಿಂದ ಹೊರಹೋದವಳು ವಾಪಸ್ ಮರಳಿಲ್ಲ. ಬಳಿಕ ಕರೆ ಮಾಡಿದ್ದ ಆಕೆ, ‘‘ನಾನು ಹುಡುಗನೊಬ್ಬನೊಂದಿಗೆ ಕೇರಳ ಕಡೆಗೆ ಹೋಗುತ್ತಿದ್ದು, ವಾಪಸ್ ಬರುವುದಿಲ್ಲ’’ ಎಂದು ತಿಳಿಸಿ ಕರೆ ಕಡಿತಗೊಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಾಪತ್ತೆಯಾದ ಬಾಲಕಿಯ ಚಹರೆ ವಿವರ:

  • ಹೆಸರು ಮತ್ತು ವಯಸ್ಸು: ಸಪ್ನಾ ದೇವಿ (15)
  • ಎತ್ತರ ಮತ್ತು ಮೈಕಟ್ಟು: 4 ಅಡಿ 8 ಇಂಚು ಎತ್ತರ, ಬಿಳಿ ಮೈಬಣ್ಣ, ಸಪೂರ ಶರೀರ
  • ಧರಿಸಿದ್ದ ಉಡುಪು: ಕಾಣೆಯಾದ ದಿನ ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದರು
  • ಭಾಷೆ: ಹಿಂದಿ ಮಾತನಾಡುತ್ತಾರೆ

ಈ ಬಾಲಕಿಯ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ಲಭ್ಯವಾದಲ್ಲಿ ತಕ್ಷಣವೇ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

- Advertisement -

Latest News

error: Content is protected !!