Thursday, November 5, 2026
Homeಅಪರಾಧಬಾಡಿಗೆ ಹಣ ಕೇಳಿದ ಆಟೋ ಚಾಲಕನ ಮೇಲೆ ಗುಂಪಿನಿಂದ ಹಲ್ಲೆ!

ಬಾಡಿಗೆ ಹಣ ಕೇಳಿದ ಆಟೋ ಚಾಲಕನ ಮೇಲೆ ಗುಂಪಿನಿಂದ ಹಲ್ಲೆ!

- Advertisement -
- Advertisement -

ಕಡಬ: ಆಟೋ ಬಾಡಿಗೆ ಹಣ ನೀಡುವಂತೆ ಕೇಳಿದ ಚಾಲಕನ ಮೇಲೆ ನಾಲ್ಕೈದು ಮಂದಿಯ ಗುಂಪೊಂದು ಹಲ್ಲೆ ನಡೆಸಿದ ಘಟನೆ ನವೆಂಬರ್ 4ರ ರಾತ್ರಿ ಕುರಿಯಾಳಕೊಪ್ಪದಲ್ಲಿ ನಡೆದಿದೆ.

ಕಡಬದ ಕೋಡಿಂಬಾಳ ನಿವಾಸಿ ಬೇಬಿ ಕೃಷ್ಣ (49) ಹಲ್ಲೆಗೊಳಗಾದ ಆಟೋ ಚಾಲಕ. ಇವರು ಕಡಬದ ಎರಡನೇ ಆಟೋ ನಿಲ್ದಾಣದಿಂದ ಆಟೋ ಸೇವೆ ನಡೆಸುತ್ತಿದ್ದರು.

ನವೆಂಬರ್ 4ರಂದು ಆಟೋ ನಿಲ್ದಾಣದಲ್ಲಿದ್ದಾಗ ಹಿಂದಿ ಮಾತನಾಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕುರಿಯಾಳಕೊಪ್ಪಕ್ಕೆ ತೆರಳಲು ಆಟೋ ಬಾಡಿಗೆಗೆ ಪಡೆದಿದ್ದ. ಆತನನ್ನು ಕುರಿಯಾಳಕೊಪ್ಪಕ್ಕೆ ತಲುಪಿಸಿದ ಬಳಿಕ ಬಾಡಿಗೆ ಹಣ ನೀಡುವುದಾಗಿ ಹೇಳಿ ಚಾಲಕನನ್ನು ಕಾಯುವಂತೆ ತಿಳಿಸಿದ್ದ. ಆದರೆ, ಹಣ ನೀಡದೆ ವ್ಯಕ್ತಿ ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ. ಬಳಿಕ ಚಾಲಕ ಹಣ ಕೇಳಲು ಆತ ತಂಗಿದ್ದ ಟೆಂಟ್‌ಗೆ ತೆರಳಿದಾಗ, ಹಣ ನೀಡದೆ ಸತಾಯಿಸಿದ್ದಾನೆ. ಈ ವೇಳೆ ಆ ವ್ಯಕ್ತಿ ಸೇರಿದಂತೆ ಇತರ 3-4 ಮಂದಿ ಸೇರಿಕೊಂಡು ಆಟೋ ಮುಂದೆ ಹೋಗದಂತೆ ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಬೇಬಿ ಕೃಷ್ಣ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ಅಪರಾಧ ಸಂಖ್ಯೆ 129/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 126(2), 115(2) ಹಾಗೂ 3(5)ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!