Thursday, November 5, 2026
Homeಕರಾವಳಿವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಢಿಕ್ಕಿ; ಚಾಲಕ, ಪತ್ನಿ ಹಾಗೂ ಸೊಸೆ ಪವಾಡಸದೃಶ ಪಾರು!

ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಢಿಕ್ಕಿ; ಚಾಲಕ, ಪತ್ನಿ ಹಾಗೂ ಸೊಸೆ ಪವಾಡಸದೃಶ ಪಾರು!

- Advertisement -
- Advertisement -

ಪುತ್ತೂರು: ನೆಲ್ಯಾಡಿ ಸಮೀಪದ ದೊಂತಿಲದಲ್ಲಿ ಕಾರೊಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ಬುಧವಾರ ಸಂಭವಿಸಿದೆ.

ಬಲ್ಯ ನಿವಾಸಿ ಸುಂದರ್ ಆಳ್ವ ಅವರು ನೆಲ್ಯಾಡಿಯಿಂದ ಬಲ್ಯ ಕಡೆಗೆ ನೆಲ್ಯಾಡಿ-ಬಲ್ಯ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಂತಿಲದಲ್ಲಿ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ತೀವ್ರತೆಗೆ ವಿದ್ಯುತ್ ಕಂಬವೊಂದು ಮುರಿದು, ಕಂಬ ಹಾಗೂ ವಿದ್ಯುತ್ ತಂತಿಗಳು ಕಾರಿನ ಮೇಲೆ ಬಿದ್ದಿವೆ. ಆ ಸಮಯದಲ್ಲಿ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದರೂ, ಸ್ವಯಂಚಾಲಿತವಾಗಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ.

ಕಾರಿನಲ್ಲಿದ್ದ ಸುಂದರ್ ಆಳ್ವ, ಅವರ ಪತ್ನಿ ಹಾಗೂ ಸೊಸೆ ಯಾವುದೇ ಗಾಯಗಳಿಲ್ಲದೆ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!