Thursday, November 5, 2026
Homeಕರಾವಳಿಆನ್‌ ಲೈನ್‌ ವಂಚನೆ ತಡೆಗೆ ಬಂಟ್ವಾಳದಲ್ಲಿ ಗ್ರಾಮಾಂತರ ಸೆನ್ ಠಾಣೆ ಆರಂಭ

ಆನ್‌ ಲೈನ್‌ ವಂಚನೆ ತಡೆಗೆ ಬಂಟ್ವಾಳದಲ್ಲಿ ಗ್ರಾಮಾಂತರ ಸೆನ್ ಠಾಣೆ ಆರಂಭ

- Advertisement -
- Advertisement -

ಬಂಟ್ವಾಳ: ಗ್ರಾಮಾಂತರ ಪ್ರದೇಶಗಳಲ್ಲಿ ಆನ್‌ಲೈನ್ ವಂಚನೆ, ಡಿಜಿಟಲ್ ಹಣಕಾಸು ವಂಚನೆ ಸೇರಿದಂತೆ ವಿವಿಧ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಗ್ರಾಮಾಂತರ ಸೆನ್ (CEN) ಪೊಲೀಸ್ ಠಾಣೆಯನ್ನು ಬಂಟ್ವಾಳಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಕೆಲವೇ ದಿನಗಳಲ್ಲಿ ನೂತನ ಠಾಣೆ ಕಾರ್ಯಾರಂಭ ಮಾಡಲಿದೆ.

ಪ್ರಸ್ತುತ ಗ್ರಾಮಾಂತರ ಸೆನ್ ಠಾಣೆ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಸುಳ್ಯ ಸೇರಿದಂತೆ ದೂರದ ಪ್ರದೇಶಗಳ ಜನರು ಸೈಬರ್ ಅಪರಾಧಗಳ ದೂರು ನೀಡಲು ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆಗೆ ಪರಿಹಾರವಾಗಿ ಬಿ.ಸಿ.ರೋಡಿನ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಹಳೆಯ ಜೈಲು ಕಟ್ಟಡವನ್ನು ನವೀಕರಿಸಿ ಸೆನ್ ಠಾಣೆಯನ್ನಾಗಿ ರೂಪಿಸಲಾಗುತ್ತಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕಂಪ್ಯೂಟರ್ ಉಪಕರಣಗಳ ಅಳವಡಿಕೆ ಸೇರಿದಂತೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.

ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳು ಹಾಗೂ ಉಳ್ಳಾಲ ತಾಲೂಕಿನ ಕೆಲವು ಗ್ರಾಮಗಳ ಜನರಿಗೆ ಈ ಠಾಣೆಯಿಂದ ಅನುಕೂಲವಾಗಲಿದೆ. ಸೈಬರ್ ಅಪರಾಧಗಳ ತನಿಖೆ ಹಾಗೂ ನಿಯಂತ್ರಣಕ್ಕೆ ಪ್ರತ್ಯೇಕ ಸೆನ್ ಠಾಣೆ ಅಗತ್ಯವಾಗಿದ್ದು, ಇನ್ನು ಮುಂದೆ ಆನ್‌ಲೈನ್ ವಂಚನೆ ಸೇರಿದಂತೆ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರು ದಾಖಲಿಸಲು ಗ್ರಾಮಾಂತರ ಭಾಗದ ಜನರು ಮಂಗಳೂರಿಗೆ ತೆರಳುವ ಅನಿವಾರ್ಯತೆ ತಪ್ಪಲಿದೆ. ಬಂಟ್ವಾಳದ ನೂತನ ಠಾಣೆಯು ಸೈಬರ್ ಅಪರಾಧ ಸಂತ್ರಸ್ತರಿಗೆ ತ್ವರಿತವಾಗಿ ನೆರವು ದೊರೆಯಲು ಸಹಕಾರಿಯಾಗಲಿದೆ.

- Advertisement -

Latest News

error: Content is protected !!