Wednesday, November 4, 2026
HomeUncategorizedಹಾಲಿನ ದರ ಬೆನ್ನಲ್ಲೇ ಪ್ರಯಾಣಿಕರಿಗೆ ಶಾಕ್: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ದರ ಏರಿಕೆ!

ಹಾಲಿನ ದರ ಬೆನ್ನಲ್ಲೇ ಪ್ರಯಾಣಿಕರಿಗೆ ಶಾಕ್: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ದರ ಏರಿಕೆ!

- Advertisement -
- Advertisement -

ಬೆಂಗಳೂರು: ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆಯ ಬಿಸಿ ಮುಟ್ಟಿಸಿದೆ. ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಅಧಿಕೃತವಾಗಿ ಹೆಚ್ಚಿಸಲಾಗಿದ್ದು, ಈ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಬಿಎಂಟಿಸಿ ದರ ಏರಿಕೆ: ಬಿಎಂಟಿಸಿ ಸಾಮಾನ್ಯ ಬಸ್‌ಗಳಲ್ಲಿ ಮೊದಲ ಸ್ಟೇಜ್ (ಪ್ರತಿ 2 ಕಿ.ಮೀ) ಟಿಕೆಟ್ ದರ ₹6 ರಿಂದ ₹10 ಕ್ಕೆ ಏರಿಕೆಯಾಗಿದೆ. ಮೆಜೆಸ್ಟಿಕ್‌ನಿಂದ ಯಶವಂತಪುರ ಹಾಗೂ ವಿಜಯನಗರಕ್ಕೆ ₹18 ಇದ್ದ ದರ ₹25 ಕ್ಕೆ ಮತ್ತು ಬನಶಂಕರಿಗೆ ₹23 ಇದ್ದ ದರ ₹35 ಕ್ಕೆ ಹೆಚ್ಚಿದೆ. ಇನ್ನು ವಾಯುವಜ್ರ (ಎಸಿ) ಬಸ್‌ಗಳಲ್ಲಿ ಗರಿಷ್ಠ ₹90 ರವರೆಗೆ ದರ ಹೆಚ್ಚಳವಾಗಿದ್ದು, ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳಕ್ಕೆ ₹55 ಇದ್ದ ದರ ₹65 ಕ್ಕೆ ತಲುಪಿದೆ.

ಕೆಎಸ್‌ಆರ್‌ಟಿಸಿ ಪರಿಷ್ಕೃತ ದರ: ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ವೇಗದೂತ ಸಾರಿಗೆ ದರದಲ್ಲೂ ಏರಿಕೆಯಾಗಿದೆ. ಬೆಂಗಳೂರಿನಿಂದ ತುಮಕೂರು, ಕೋಲಾರಕ್ಕೆ ₹81 ಇದ್ದ ದರ ₹100, ಮಂಡ್ಯಗೆ ₹110 ರಿಂದ ₹136, ಮೈಸೂರಿಗೆ ₹160 ರಿಂದ ₹197 ಹಾಗೂ ಹಾಸನಕ್ಕೆ ₹219 ರಿಂದ ₹270 ಕ್ಕೆ ಏರಿಕೆಯಾಗಿದೆ.

ದರ ಏರಿಕೆಗೆ ಸಮರ್ಥನೆ: ಕಳೆದ 10 ವರ್ಷಗಳಿಂದ ಬಸ್ ದರ ಏರಿಕೆ ಮಾಡಿರಲಿಲ್ಲ. ಡೀಸೆಲ್ ಬೆಲೆ ಹಾಗೂ ಸಿಬ್ಬಂದಿ ವೆಚ್ಚ ಹೆಚ್ಚಳವಾಗಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಯಾವುದೇ ನಷ್ಟ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!