- Advertisement -


- Advertisement -
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ವಾಹಿನಿ ಪವರ್ ಟಿವಿ ಕಚೇರಿ ಹಾಗೂ ವಾಹಿನಿಯ ಮಾಲಕ ರಾಕೇಶ್ ಶೆಟ್ಟಿ ಅವರ ಕೊಡಿಗೇಹಳ್ಳಿಯ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಸುಮಾರು 30 ಅಧಿಕಾರಿಗಳಿದ್ದ ಸಿಸಿಬಿ ತಂಡವು ಏಕಕಾಲದಲ್ಲಿ ಎರಡೂ ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆಗಳು ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ವಿರುದ್ಧದ ವಿಡಿಯೊವನ್ನು ತಾವೇ ಚಿತ್ರೀಕರಿಸಿದ್ದಾಗಿ ರಾಕೇಶ್ ಶೆಟ್ಟಿ ಈ ಹಿಂದೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ, ಪವರ್ ಟಿವಿ ಕಚೇರಿ ಮೇಲೆ ದಾಳಿ ನಡೆಸಿದರೆ ಇಂತಹ ಇನ್ನೂ ಹಲವು ವಿಡಿಯೊಗಳು ಸಿಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು.
ಈ ಆರೋಪಗಳು ಹಾಗೂ ಬೆಳವಣಿಗೆಗಳ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಎರಡೂ ಸ್ಥಳಗಳಲ್ಲಿ ಪರಿಶೀಲನೆ ಮುಂದುವರಿದಿದೆ.
- Advertisement -


