Tuesday, October 27, 2026
Homeಉತ್ತರ ಕನ್ನಡಕಾರವಾರ: ತದಡಿ ಬಂದರಿನಲ್ಲಿ ಭೀಕರ ದುರಂತ; ಬೋಟ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ಮೂವರು...

ಕಾರವಾರ: ತದಡಿ ಬಂದರಿನಲ್ಲಿ ಭೀಕರ ದುರಂತ; ಬೋಟ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ಮೂವರು ಮೀನುಗಾರರ ಸಾವು

- Advertisement -
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಮೀನುಗಾರಿಕಾ ಬೋಟ್‌ನ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ಮೂವರು ಮೀನುಗಾರರು ದಾರುಣವಾಗಿ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಅಸ್ವಸ್ಥಗೊಂಡ ಭೀಕರ ದುರಂತ ಮಂಗಳವಾರ ಸಂಭವಿಸಿದೆ.

ಮೃತ ಮೀನುಗಾರರನ್ನು ನೌಶಾದ್ (48), ಅಮೀನ್ (40) ಹಾಗೂ ಅಮನ್ (26) ಎಂದು ಗುರುತಿಸಲಾಗಿದೆ.

ತದಡಿ ಬಂದರಿನಲ್ಲಿ ಲಂಗರು ಹಾಕಿದ್ದ ‘ಕುಚೈಮಾ’ ಎಂಬ ಬೋಟ್‌ನಲ್ಲಿ ಮೀನು ಖಾಲಿ ಮಾಡಿದ ಬಳಿಕ, ಖಾಲಿಯಾದ ಸಂಗ್ರಹಣಾ ಟ್ಯಾಂಕ್‌ಗೆ ಇಳಿದು ಸ್ವಚ್ಛಗೊಳಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಟ್ಯಾಂಕ್‌ನಲ್ಲಿದ್ದ ವಿಷಕಾರಿ ಅನಿಲದ ದುರ್ವಾಸನೆಯಿಂದಾಗಿ ತೀವ್ರ ಉಸಿರುಗಟ್ಟಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಟ್ಯಾಂಕ್ ಒಳಗೆ ಸಿಲುಕಿದ್ದ ಐವರ ಪೈಕಿ ಇಬ್ಬರನ್ನು ಸಹ-ಮೀನುಗಾರರು ರಕ್ಷಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಅಬ್ದುಲ್ ಯಾಕುಬ್ ದಾಡಿಯಾ (60) ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!