Sunday, October 11, 2026
Homeಕರಾವಳಿಉಜಿರೆಯಲ್ಲಿ ಮೆಡಿಕಲ್‌ಗೆ ನುಗ್ಗಿದ ಕಾರು: ನಾಲ್ವರು ಪ್ರಾಣಾಪಾಯದಿಂದ ಪಾರು

ಉಜಿರೆಯಲ್ಲಿ ಮೆಡಿಕಲ್‌ಗೆ ನುಗ್ಗಿದ ಕಾರು: ನಾಲ್ವರು ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಬೆಳ್ತಂಗಡಿ : ಚಾರ್ಮಾಡಿ ರಸ್ತೆಯಲ್ಲಿರುವ ಮೆಡಿಕಲ್‌ವೊಂದಕ್ಕೆ ಕಾರು ನುಗ್ಗಿದ ಘಟನೆ ಅ.10 ರಂದು ಶನಿವಾರ ನಡೆದಿದೆ. ಘಟನೆಯಲ್ಲಿ ಮೆಡಿಕಲ್‌ಗೆ ಅಲ್ಪಸ್ವಲ್ಪ ಹಾನಿಯಾಗಿದ್ದು, ಮುಂಭಾಗದಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ರಸ್ತೆಯಲ್ಲಿ ಹೊಸದಾಗಿ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಚಾಲಕ ಕೆಳಗಿಳಿದು ಹೋಗಿದ್ದರು ಎನ್ನಲಾಗಿದೆ.

ಈ ವೇಳೆ ನಿಲ್ಲಿಸಿದ್ದ ಕಾರು ಏಕಾಏಕಿ ಚಲಿಸಿ, ರಸ್ತೆಯ ಕೆಳಭಾಗದಲ್ಲಿದ್ದ ಮೆಡಿಕಲ್‌ಗೆ ನುಗ್ಗಿದೆ.ಕಾರು ಮೆಡಿಕಲ್‌ನತ್ತ ಬರುತ್ತಿರುವುದನ್ನು ಗಮನಿಸಿದ ಮುಂಭಾಗದಲ್ಲಿದ್ದ ನಾಲ್ವರು ತಕ್ಷಣವೇ ಪಕ್ಕಕ್ಕೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ನೇರವಾಗಿ ಮೆಡಿಕಲ್‌ಗೆ ನುಗ್ಗಿದ್ದರಿಂದ ಅಂಗಡಿಗೆ ಅಲ್ಪಸ್ವಲ್ಪ ಹಾನಿಯಾಗಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಮೆಡಿಕಲ್‌ಗೆ ಉಂಟಾದ ಹಾನಿಯ ವೆಚ್ಚವನ್ನು ಭರಿಸುವುದಾಗಿ ಕಾರು ಚಾಲಕ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!