Saturday, October 10, 2026
Homeಕರಾವಳಿಮಂಗಳೂರುಮಂಗಳೂರು; ಕೊಟ್ಟಾರಚೌಕಿ ಬಳಿ ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಕಬ್ಬಿಣದ ಸಲಾಕೆಗಳು: ಕೆಲಕಾಲ ಸಂಚಾರ ಅಸ್ತವ್ಯಸ್ತ

ಮಂಗಳೂರು; ಕೊಟ್ಟಾರಚೌಕಿ ಬಳಿ ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಕಬ್ಬಿಣದ ಸಲಾಕೆಗಳು: ಕೆಲಕಾಲ ಸಂಚಾರ ಅಸ್ತವ್ಯಸ್ತ

- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರಚೌಕಿಯ ಮಾಲೆಮಾರ್‌ ಕ್ರಾಸ್‌ ಬಳಿ ಗುರುವಾರ ರಾತ್ರಿ ಚಲಿಸುತ್ತಿದ್ದ ಪಿಕಪ್‌ ವಾಹನದಿಂದ ಕಬ್ಬಿಣದ ಸಲಾಕೆಗಳು ರಸ್ತೆಗೆ ಬಿದ್ದು, ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ಸಂಭವಿಸಿದೆ.

ಕಬ್ಬಿಣದ ಸಲಾಕೆಗಳನ್ನು ತುಂಬಿಕೊಂಡು ಸಾಗುತ್ತಿದ್ದ ಪಿಕಪ್‌ ವಾಹನಕ್ಕೆ ಬೈಕ್‌ವೊಂದು ಏಕಾಏಕಿ ಅಡ್ಡ ಬಂದಿದೆ. ಈ ವೇಳೆ ಅಪಾಯವನ್ನು ತಪ್ಪಿಸಲು ಪಿಕಪ್‌ ಚಾಲಕ ದಿಢೀರ್‌ ಬ್ರೇಕ್‌ ಹಾಕಿದ್ದಾರೆ. ಪರಿಣಾಮವಾಗಿ ವಾಹನದಲ್ಲಿದ್ದ ಕಬ್ಬಿಣದ ಸಲಾಕೆಗಳು ರಸ್ತೆಗೆ ಚೆಲ್ಲಿ ಬಿದ್ದಿವೆ.

ರಸ್ತೆಯುದ್ದಕ್ಕೂ ಸಲಾಕೆಗಳು ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಬಳಿಕ ರಸ್ತೆಯಲ್ಲಿದ್ದ ಸಲಾಕೆಗಳನ್ನು ತೆರವುಗೊಳಿಸಿ, ವಾಹನ ಸಂಚಾರವನ್ನು ಸುಗಮಗೊಳಿಸಲಾಯಿತು. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಮಟ್ಟದ ಅಪಘಾತ ತಪ್ಪಿದಂತಾಗಿದೆ.

- Advertisement -

Latest News

error: Content is protected !!