ಬೆಳ್ತಂಗಡಿ : ಕಲ್ಮಂಜ ಗ್ರಾಮದ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಕುರಿತಂತೆ ರಾಜ್ ಕಿಶನ್ ಪಿಂಟೊ ಅಕ್ಷಯ ನಗರ, ನಿಡಿಗಲ್, ಕಲ್ಮಂಜ ಇವರು ಸಂಘದ ಸದಸ್ಯರಲ್ಲದಿದ್ದರೂ ತಾನು ಸಂಘದ ಪ್ರಮುಖ ಸದಸ್ಯನೆಂದು ಹೇಳಿಕೊಂಡು, ದರ್ಶನ್ ಕೆ.ಪಿ, ತಂದೆ ಪ್ರಭಾಕರ ಕೆ. ಶಿವಂಕರಿ ನಿಲಯ, ಬೀಜದಪಾಡಿ, ಕಲ್ಮಂಜ ರವರೊಂದಿಗೆ ಸೇರಿಕೊಂಡು ಸಂಘದ ಹೆಸರು ಬಳಸಿಕೊಂಡು ಸಂಘ ಹಾಗೂ ಸಂಘದ ಸದಸ್ಯರ ವಿರುದ್ಧ ಆಧಾರ ರಹಿತ ಮತ್ತು ಸುಳ್ಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪ್ರಸಾರ ಮಾಡುತ್ತಿದ್ದಾರೆ. ಅಲ್ಲದೆ ಕೆಲವು ನಕಲಿ ಸಹಿಗಳನ್ನು ಒಳಗೊಂಡ ಮನವಿಯನ್ನು ಸಿದ್ಧಪಡಿಸಿ ಪ್ರಸಾರ ಮಾಡಿ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ.
ಇದೇ ರೀತಿಯಲ್ಲಿ ಇವರ ಜೊತೆ ದಿನೇಶ್, ಪಂಚಶ್ರೀ ನಿಲಯ, ಕಲ್ಮಂಜ ರವರು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಂಘದ ಕುರಿತು ಸುಳ್ಳು ಮತ್ತು ಆಧಾರರಹಿತ ಮಾಹಿತಿಯ ಪೋಸ್ಟ್‌ಗಳನ್ನು ಪ್ರಸಾರ ಮಾಡಿ ಮಾನ ಹಾನಿ ಮಾಡುತ್ತಿದ್ದಾರೆ.
ಈ ಕೃತ್ಯಗಳಿಂದ ಸಂಘದ ಗೌರವಕ್ಕೆ ಧಕ್ಕೆ ಉಂಟಾಗಿದ್ದು, ಸದಸ್ಯರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದ್ದು ಸುಳ್ಳು ಮತ್ತು ಆಧಾರ ರಹಿತ ಪೋಸ್ಟ್ ಮಾಡಿ ಮಾನ ಹಾನಿ ಮಾಡಿರುವ ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೆ.29 ರಂದು ಧರ್ಮಸ್ಥಳ ಠಾಣೆಗೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಇವರು ದೂರು ನೀಡಿರುತ್ತಾರೆ.ಜೊತೆಗೆ ಸಂಘದ ಕಚೇರಿಗೆ ಸಿ ಸಿ ಕ್ಯಾಮರಾ ಅಳವಡಿಸುವಂತೆ ಸಹಕಾರ ಇಲಾಖೆ, ದ. ಕ. ಹಾಲು ಒಕ್ಕೂಟ ಸೇರಿದಂತೆ ಸಂಘದ ವಿಶೇಷಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.


