Monday, September 28, 2026
Homeಕರಾವಳಿಮಂಗಳೂರುಮಾಣಿ ಫ್ಲೈಓವರ್ ಬಳಿ ಕಾರು-ಪಿಕಪ್ ಭೀಕರ ಅಪಘಾತ: ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ

ಮಾಣಿ ಫ್ಲೈಓವರ್ ಬಳಿ ಕಾರು-ಪಿಕಪ್ ಭೀಕರ ಅಪಘಾತ: ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ

- Advertisement -
- Advertisement -

ಬಂಟ್ವಾಳ; ಮಾಣಿ ಸಮೀಪದ ಹಳೀರ ಫ್ಲೈ ಓವರ್ ಬಳಿ ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮಡಿಕೇರಿ ಮೂಲದ ಮಹಿಳೆಯೊಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಮಡಿಕೇರಿ ನಿವಾಸಿ ನಫೀಸಾ (55) ಮೃತಪಟ್ಟ ದುರ್ದೈವಿ.

ಉಮ್ರಾ ತರಗತಿ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಒಂದೇ ಕುಟುಂಬದ 5 ಜನರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸೋಮವಾರ ಬೆಳಿಗ್ಗೆ 6 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪುತ್ತೂರು, ಮಡಿಕೇರಿ ಹಾಗೂ ಮೈಸೂರು ರಸ್ತೆಗೆ ಪ್ರವೇಶಿಸುವ ಹಳೀರ ಸರ್ವಿಸ್ ರಸ್ತೆಯಲ್ಲಿ ಸರಿಯಾದ ಸೂಚನಾ ಫಲಕಗಳಿಲ್ಲದಿರುವುದು ಮತ್ತು ರಸ್ತೆ ಕಿರಿದಾಗಿರುವುದರಿಂದ ವಾಹನ ಸವಾರರಲ್ಲಿ ಗೊಂದಲ ಉಂಟಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

- Advertisement -

Latest News

error: Content is protected !!