Saturday, September 26, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಲಾಯಿಲದಲ್ಲಿ ಅಕ್ರಮವಾಗಿ ಹಲಸಿನ ಮರ ಕಡಿದ ಪ್ರಕರಣ;ಪ್ರಸನ್ನ ಎಜುಕೇಶನ್ ಟ್ರಸ್ಟ್ ಮೇಲ್ವಿಚಾರಕನ ವಿರುದ್ಧ...

ಬೆಳ್ತಂಗಡಿ : ಲಾಯಿಲದಲ್ಲಿ ಅಕ್ರಮವಾಗಿ ಹಲಸಿನ ಮರ ಕಡಿದ ಪ್ರಕರಣ;ಪ್ರಸನ್ನ ಎಜುಕೇಶನ್ ಟ್ರಸ್ಟ್ ಮೇಲ್ವಿಚಾರಕನ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ : ಅರಣ್ಯ ಇಲಾಖೆಯ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಹಲಸಿನ ಮರ ಕಡಿದ ಪ್ರಕರಣ ಸಂಬಂಧ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪ್ರಸನ್ನ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಗಂಗಾಧರ ಗೌಡ ಅವರ ಮಾಲೀಕತ್ವದ ಸರ್ವೆ.ನಂ 396 ರ ಪಟ್ಟ ಜಾಗದಲ್ಲಿ ಬೆಳ್ತಂಗಡಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರ ಕಡಿದ ಪ್ರಕರಣ ಸಂಬಂಧ ಸೆ.16 ರಂದು ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿದ್ದಾರೆ.

ಪ್ರಕರಣ ಸಂಬಂಧ 0.250 ಕ್ಯೂಬಿಕ್ ಮೀಟರ್ ಎರಡು ಹಲಸಿನ ಮರದ ದಿಮ್ಮಿಗಳು ಮತ್ತು ಕಟ್ಟಿಗೆಗಳನ್ನು ಬೆಳ್ತಂಗಡಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಲು ಅನುಮತಿಗಾಗಿ ವರದಿಯನ್ನು ನೀಡಿದ್ದರು. ಬೆಳ್ತಂಗಡಿ ನ್ಯಾಯಾಲಯ ಸೆ.25 ರಂದು ಪ್ರಕರಣ ದಾಖಲಿಸಲು ಅನುಮತಿ ನೀಡಿದ ಬಳಿಕ ಸಂಜೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಪ್ರಸನ್ನ ಎಜುಕೇಶನ್ ಟ್ರಸ್ಟ್ ನ ಮೇಲ್ವಿಚಾರಕನಾಗಿರುವ ಪುತ್ತೂರು ತಾಲೂಕಿನ ಆರ್ಯಾಪು ನಿವಾಸಿಯಾಗಿರುವ ಹೇಮಂತ್ ಕುಮಾರ್(38) ವಿರುದ್ಧ ವೃಕ್ಷ ಸಂರಕ್ಷಣಾ ಕಾಯ್ದೆ 8, R/w 22 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮಹೇಶ್ ದೇವಾಡಿಗ, ಡಿ.ಆರ್.ಎಫ್.ಓ ಕಿರಣ್ ಪಾಟೀಲ್ ಮತ್ತು ಪಿ.ಜಿ.ನಾಗೇಶ್, ಗಸ್ತು ಅರಣ್ಯ ಪಾಲಕ ಪರಶುರಾಮ.ಜಿ.ಎಮ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -

Latest News

error: Content is protected !!