- Advertisement -
- Advertisement -
ಸುಳ್ಯ: ಪೆರುವಾಜೆ ಗ್ರಾಮದ ಅನವುಗುಂಡಿ ಬಳಿ ಕುಟುಂಬ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಸ್ಥಳೀಯ ನಿವಾಸಿ ಗಣೇಶ ಎಂಬಾತನೇ ಈ ಕೃತ್ಯ ಎಸೆಗಿದ ಆರೋಪಿ. ಶನಿವಾರ ರಾತ್ರಿ ಅತ್ತೆಯ ಮನೆಗೆ ಬಂದಿದ್ದ ಈತ, ಭಾನುವಾರ ಮಧ್ಯಾಹ್ನ ಪತ್ನಿ ವಿನುತಾ ಹಾಗೂ ಅತ್ತೆಯ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ವಿನುತಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಹಾಗೂ ಅತ್ತೆಯನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಳಿಕ ಆರೋಪಿ ಗಣೇಶ ತಲೆಮರೆಸಿಕೊಂಡಿದ್ದು, ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ
- Advertisement -


