- Advertisement -
- Advertisement -
ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿ ತಾಲೀಮಿಗಾಗಿ ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳ ತೂಕ ಪರೀಕ್ಷೆ ಇಂದು ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ತೂಕ ಮಾಪನ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಬಾರಿಯ ತೂಕ ಪರೀಕ್ಷೆಯಲ್ಲಿ 5,790 ಕೆಜಿ ತೂಗುವ ಮೂಲಕ ಶ್ರೀಕಂಠ ಆನೆ ಅತ್ಯಂತ ಬಲಶಾಲಿ ಹಾಗೂ ಗರಿಷ್ಠ ತೂಕದ ಆನೆಯಾಗಿ ಹೊರಹೊಮ್ಮಿದೆ.
ಆನೆಗಳ ತೂಕದ ವಿವರ:
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ
ತೂಕ ಪರೀಕ್ಷೆಯ ಬಳಿಕ ಆನೆಗಳಿಗೆ ವಿಶೇಷ ಪೌಷ್ಟಿಕ ಆಹಾರ ಮತ್ತು ಜಂಬೂಸವಾರಿಯ ತಾಲೀಮು ಆರಂಭವಾಗಲಿದೆ.
- Advertisement -


