- Advertisement -
- Advertisement -
ಉಪ್ಪುಂದ: ಮೀನುಗಾರಿಕೆಗೆ ತೆರಳಲು ಸಮುದ್ರ ತೀರದಲ್ಲಿ ಬಲೆ ಸಿದ್ಧಪಡಿಸುತ್ತಿದ್ದ ವೇಳೆಯಲ್ಲೇ ಮೀನುಗಾರರೊಬ್ಬರು ಎದೆನೋವಿನಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಆ. 28ರಂದು ನಡೆದಿದೆ.
ಕರಿನಹಿತ್ತು ನಿವಾಸಿ ನಾರಾಯಣ ಪೂಜಾರಿ (73) ಮೃತಪಟ್ಟ ದುರ್ದೈವಿ.
ಆಗಸ್ಟ್ 28ರಂದು ಬೆಳಗ್ಗೆ ಶಿರೂರು ಗ್ರಾಮದ ಸೋಡಿಬೆಟ್ಟು ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ಹೋಗಲು ಬಲೆ ಕೆಲಸ ಮಾಡುತ್ತಿದ್ದಾಗ ನಾರಾಯಣ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡು ನೆಲಕ್ಕೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


